ಕಳಪೆ ಗುಣಮಟ್ಟದ ಶೇಂಗಾಬೀಜ ವಿತರಣೆ : ಅಧಿಕಾರಿಗಳ ವಿರುದ್ಧ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

3

ಶ್ರೀನಿವಾಸಪುರ, ಅ.7- ತಾಲ್ಲೂಕಿನಾದ್ಯಂತ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಲಾಗಿರುವ ಶೇಂಗಾ ಬೀಜವು ಕಳಪೆ ಗುಣಮಟ್ಟದ್ದಾಗಿದೆ ಎಂದು ಗ್ರಾಪಂ ಸದಸ್ಯ ಟಿ.ಜಿ.ರಮೇಶ್ ಆರೋಪಿಸಿದ್ದಾರೆ.ತಾಲ್ಲೂಕಿನ ಗೌನಿಪಲ್ಲಿಯ ವಾರ್ಡ್ ನಂ.1ರ ಜನತಾ ಕಾಲೋನಿ ಹಾಗೂ ಮದರಸ ಅಂಗನವಾಡಿ ಕೇಂದ್ರಗಳಿಗೆ ಸೆಪ್ಟೆಂಬರ್ ತಿಂಗಳಲ್ಲಿ ಸರಬರಾಜಾಗಿರುವ ಕಡಲೆಕಾಯಿ ಬೀಜ ಬೂಸ್ಟ್ ಹಿಡಿದಿದ್ದು, ಈ ಬೀಜ ಸುಮಾರು 11 ಕೆಜಿ ತೂಕವಿದ್ದು, 700 ಗ್ರಾಂ ತೂಕದ ಬೀಜವನ್ನು ನೀರು ಸಿಂಪಡಿಸಿ 1 ಕೆಜಿ ತೂಕ ಬರುವಂತೆ ಪೆÇಟ್ಟಣ ಮಾಡಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸರಬರಾಜು ಮಾಡಿರುವ ಕಡಲೆಕಾಯಿ ಬೀಜವನ್ನು ತಾಲ್ಲೂಕಿನ ಅರಿಕೆರೆ ಗ್ರಾಮದಲ್ಲಿ ತಯಾರು ಮಾಡಲಾಗಿದೆ.ಈ ಹಿಂದೆಯೂ ಇಲಾಖೆ ಸರಬರಾಜು ಮಾಡಿದ್ದ ತೊಗರಿಬೇಳೆ ಮತ್ತು ಆಹಾರ ಪದಾರ್ಥಗಳು ಕಳಪೆಯಿಂದ ಕೂಡಿತ್ತು. ಇದೀಗ ಮತ್ತೊಮ್ಮೆ ಇಂತಹ ಕಳಪೆ ಗುಣಮಟ್ಟದ ಶೇಂಗಾ ಬೀಜ ಸರಬರಾಜು ಮಾಡಿ ಬೇಜವಾಬ್ದಾರಿತನ ತೋರಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇನ್ನು ಮುಂದಾದರೂ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳಿಗೆ ಕಡಿವಾಣ ಹಾಕಿ ಸೂಕ್ತ ಕ್ರಮಕೈಗೊಳ್ಳಲು ಮುಂದಾಗುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ ಎಂದು ಪತ್ರಿಕಾಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin