ಕಳಪೆ ಸಾಧನೆ ಮಾಡಿದ 245 ಐಟಿ ಆಯುಕ್ತರ ಎತ್ತಂಗಡಿ

ಈ ಸುದ್ದಿಯನ್ನು ಶೇರ್ ಮಾಡಿ

INCOME-TAX

ನವದೆಹಲಿ, ಜು.17-ಆದಾಯ ತೆರಿಗೆ ಇಲಾಖೆಯ ಇತಿಹಾಸದಲ್ಲೇ ಅತಿದೊಡ್ಡದು ಎನ್ನಲಾದ ಪುನಾರಚನೆಯಲ್ಲಿ, ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ದೇಶಾದ್ಯಂತ 245 ಆಯುಕ್ತರನ್ನು ಎತ್ತಂಗಡಿ ಮಾಡಿದೆ. ಕಾರ್ಯದಕ್ಷತೆ ಕೊರತೆ ಮತ್ತು ಕಳಪೆ ಸಾಧನೆಯಿಂದಾಗಿ ಇಲಾಖೆಯ ಉನ್ನತ ಹುದ್ದೆಯಿಂದ ಇಷ್ಟು ಮಂದಿಯನ್ನು ವರ್ಗಾವಣೆ ಮಾಡಲು ಮುಖ್ಯ ಕಾರಣವಾಗಿದೆ. ಕಳೆದ ಎರಡು ಅಥವಾ ಅದಕ್ಕೂ ಹೆಚ್ಚು ಕಾಲದಿಂದ ಮಹತ್ವದ ಸ್ಥಳಗಳಲ್ಲಿ ಉನ್ನತ ಹುದ್ದೆಯಲ್ಲಿದ್ದ ಇವರನ್ನು ಅಸಮರ್ಥರು ಎಂಬ ಕಾರಣಕ್ಕಾಗಿ ಎತ್ತಂಗಡಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ ವರ್ಗಾವಣೆಯಾದವರಲ್ಲಿ ಜಾಗೃತದಳದಿಂದ ತನಿಖೆಗೆ ಒಳಗಾದವರು ಅಥವಾ ಅಶಿಸ್ತು ಪ್ರಕರಣಗಳಿಗೆ ಗುರಿಯಾದವರೂ ಇದ್ದಾರೆ.

ಈ ಸಂಬಂಧ ತನ್ನ ಉನ್ನತಾ ಧಿಕಾರಿಗಳಿಗೆ ಪ್ರತ್ಯೇಕ ನಿರ್ದೇಶನ ಗಳನ್ನು ನೀಡಿರುವ ಸಿಡಿಡಿಟಿ, ಕಾರ್ಯ ದಕ್ಷತೆಯನ್ನು ಹೆಚ್ಚಿಸಿ ಕೊಳ್ಳುವಂತೆಯೂ ಸೂಚಿಸಿದೆ.
ತಮ್ಮ ಪ್ರದೇಶದಲ್ಲಿ ಇಲಾಖೆ ಸಂಬಂಧಪಟ್ಟ ನಿರ್ದಿಷ್ಟ ವಿವರಗಳೊಂದಿಗೆ ಪ್ರಾದೇಶಿಕ ರೂಪು-ರೇಷೆಯನ್ನು ಅಭಿವೃದ್ದಿ ಗೊಳಿಸುವಂತೆ ಸೂಚಿಸಿದೆ. ತೆರಿಗೆ ವಂಚನೆಯನ್ನು ತಪ್ಪಿಸಲು ಹಾಗೂ ಇಲಾಖೆ ಆದಾಯವನ್ನು ಹೆಚ್ಚಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆಯೂ ತಿಳಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin