ಕಳವು ಪ್ರಕರಣ : ಮೂವರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Arrested-01

ಮಂಡ್ಯ,ಅ.20-ಕಳೆದ 28ರಂದು ಶ್ರೀರಂಗಪಟ್ಟಣದ ಕುಸುಮ ಚಂದ್ರಶೇಖರ್ ಕಲ್ಯಾಣ ಮಂಟಪದ ಬಳಿ ಕಾರಿನಲ್ಲಿದ್ದ ವಸ್ತುಗಳನ್ನು ಕಳವು ಮಾಡಿದ್ದ ಮೂವರನ್ನು ಬಂಧಿಸಿರುವ ಶ್ರೀರಂಗಪಟ್ಟಣ ಪೊಲೀಸರು ಅವರಿಂದ ಒಂದು ದುಬಾರಿ ಕ್ಯಾಮೆರಾ ಮತ್ತು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಅಕ್ಟೋಬರ್ 28ರಂದು ಈ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆಗೆ ಬಂದಿದ್ದ ಬೆಂಗಳೂರು ಆರ್‍ಟಿನಗರದ ವಾಸುದೇವ ಎಂಬುವರು ಕಾರಿನ ವಿಂಡೋ ಕ್ಲೋಸ್ ಮಾಡದೆ ಹಾಗೇ ಬಿಟ್ಟಿದ್ದರು. ಈ ಸಮಯ ದುಷ್ಕರ್ಮಿಗಳು ಅದರಲ್ಲಿದ್ದ 1.40 ಲಕ್ಷ ರೂ. ಮೌಲ್ಯದ ಇಕಾನ್ ಕ್ಯಾಮೆರಾ ಮತ್ತು ಐದು ಮೊಬೈಲ್ ಹ್ಯಾಂಡ್‍ಸೆಟ್‍ಗಳನ್ನು ಅಪಹರಿಸಿ ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಶ್ರೀರಂಗಪಟ್ಟಣ ಸಿಪಿಐ ಚಂದ್ರಶೇಖರ್ ತಮ್ಮ ತಂಡದೊಂದಿಗೆ ಕಾರ್ಯಾಚರಣೆ ನಡೆಸಿ ಕೆ.ಆರ್.ಪೇಟೆ ತಾಲ್ಲೂಕು ನಿಂಗಾಪುರ ನಿವಾಸಿ ಯತೀಶ(24), ಬೊಮ್ಮನಹಳ್ಳಿ ಅಭಿಷೇಕ್(26) ಮತ್ತು ಶ್ರವಣಬೆಳಗೊಳ ತಾಲ್ಲೂಕಿನ ಜಿಲ್ಯಾ ನಿವಾಸಿ ನಿತಿನ್(24) ಎಂಬುವರನ್ನು ಬಂಧಿಸಿ ಅವರಿಂದ ಕಳವು ಮಾಲು ವಶಪಡಿಸಿಕೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin