ಕಳ್ಳರಿಂದ ಮಾರಣಾಂತಿಕ ಹಲ್ಲೆ

ಈ ಸುದ್ದಿಯನ್ನು ಶೇರ್ ಮಾಡಿ

5

ಬೆಳಗಾವಿ/ಚಿಕ್ಕೋಡಿ,ಫೆ.6- ಕಳ್ಳರು ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಚಿಕ್ಕೋಡಿ ತಾಲ್ಲೂಕಿನ ಕರೋಶಿ ಗ್ರಾಮದಲ್ಲಿ ಸಂಭವಿಸಿದೆ.
ಸರಣಿ ಕಳ್ಳತನಕ್ಕೆ ಬೈಕ್‍ನಲ್ಲಿ ಬಂದಿದ್ದ ಕಳ್ಳರಿಂದ ಈ ಕೃತ್ಯ ನಡೆದಿದೆ.ಎರಡು ಮನೆ, ಮಠ ಹಾಗೂ ಔಷಧ ಅಂಗಡಿಯಲ್ಲಿ ಈ ಕಳ್ಳರ ತಂಡ, ಸರಣಿ ಕಳ್ಳತನ ನಡೆಸಿದೆ. ರಾತ್ರಿ ಸದ್ದು ಕೇಳಿ ಎಚ್ಚರಗೊಂಡ ಸಾರ್ವಜನಿಕರು ಕಳ್ಳರನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಒಬ್ಬರ ತಲೆ ಮೇಲೆ ರಾಡ್‍ನಿಂದ ಹಲ್ಲೆ ನಡೆಸಿ ಕಳ್ಳರು ಪರಾರಿಯಾಗಿದ್ದಾರೆ. ಈ ಘಟನೆಯಿಂದ ರಾಜು ಹಳಿಂಗಳಿ(45) ಎಂಬುವರಿಗೆ ಗಂಬೀರ ಗಾಯವಾಗಿದ್ದು ಚಿಕ್ಕೋಡಿ ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕ್ಕೋಡಿ ಪೊಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin