ಕಳ್ಳ ಮಗನನ್ನು ಪೊಲೀಸರಿಗೆ ಒಪ್ಪಿಸಿದ ತಂದೆ

ಈ ಸುದ್ದಿಯನ್ನು ಶೇರ್ ಮಾಡಿ

arrest

ಕುಣಿಗಲ್,ಸೆ.29-ಕಳ್ಳತನ ಮಾಡಿದ್ದ ಮಗನನ್ನು ತಂದೆಯೇ ಪೊಲೀಸರಿಗೆ ಘಟನೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಟ್ಟಣದ ಗುಜ್ಜರಿ ಮೊಹಲ್ಲಾದ ನಿವಾಸಿ ಸಿಕ್ಕಂದರ್(15) ಈಗ ಪೊಲೀಸರ ವಶದಲ್ಲಿದ್ದು ವಿಚಾರಣೆ ಎದುರಿಸುತ್ತಿದ್ದಾನೆ.  ಘಟನೆ ವಿವರ: ಕೆಎಸ್‍ಆರ್‍ಟಿಸಿಯಲ್ಲಿ ಚಾಲಕರಾಗಿರುವ ನಿಸಾರ್ ಅಹಮ್ಮದ್ ಕುಣಿಗಲ್‍ನಲ್ಲಿ ಕುಟುಂಬ ಸಮೇತ ವಾಸವಾಗಿದ್ದಾರೆ. ಶಾಲೆಯನ್ನು ಅರ್ಧಕ್ಕೆ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದ ಸಿಕ್ಕಂದರ್ ಅಕ್ಕಪಕ್ಕದ ಮನೆಯವರಿಗೂ ಕಿರಿಕಿರಿ ಮಾಡುತ್ತಿದ್ದ. ಇದರಿಂದ ಬೇಸತ್ತಿದ್ದ ಅಹಮ್ಮದ್ ಅವರು ಸಾಕಷ್ಟು ಬಾರಿ ಹೊಡೆದು ಬುದ್ದಿವಾದ ಹೇಳಿದ್ದರು.

ಸಿಕ್ಕಂದರ್ ಹಲವೆಡೆ ಕಳ್ಳತನ ಮಾಡಿ ಕದ್ದ ಮಾಲುಗಳನ್ನು ಮನೆಯಲ್ಲಿಯೇ ಇಡುತ್ತಿದ್ದ. ಇದಲ್ಲದೆ ಹಲವು ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಅದನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗುತ್ತಿದ್ದ. ಈತನ ಬಗ್ಗೆ ಹಲವಾರು ಮಂದಿ ಮನೆಗೆ ಬಂದು ಪೊಷಕರಿಗೆ ತಿಳಿಸುತ್ತಿದ್ದರು. ಅಹಮ್ಮದ್ ಅವರು ಬೇರೆ ದಾರಿ ಕಾಣದೆ ಮಗನನ್ನು ಕುಣಿಗಲ್ ಪೊಲೀಸ್ ಠಾಣೆಗೆ ಕರೆತಂದು ಎಲ್ಲ ವಿಷಯ ತಿಳಿಸಿ, ಕದ್ದು ತಂದಿದ್ದ ಮಾಲನ್ನು ಕೂಡ ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಸ್ತುತ ಆರೋಪಿ ಅಪ್ರಾಪ್ತನಾಗಿರುವುದರಿಂದ ರಿಮ್ಯಾಂಡ್‍ರೂಮ್‍ಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin