ಕವಿ ಶಿವರಾಮ ಕಾರಂತರು ಅಸ್ಪೃಶ್ಯತೆಯ ವಿರುದ್ಧ ಧ್ವನಿಯೆತ್ತಿದವರು

ಈ ಸುದ್ದಿಯನ್ನು ಶೇರ್ ಮಾಡಿ

chintamani
ಚಿಂತಾಮಣಿ, ಅ.31-ಕನ್ನಡ ಸಾಹಿತ್ಯ ಲೋಕದ ದಿಗ್ಗಜರಾದ ಶಿವರಾಮ ಕಾರಂತರು ಅಸ್ಪಶ್ಯತೆಯ ವಿರುದ್ಧ ಧ್ವನಿಯೆತ್ತಿ ಮಾನವೀಯ ಮೌಲ್ಯಗಳಿಗೆ ಒತ್ತು ನೀಡಿದ ಧೀಮಂತ ಕವಿ ಎಂದು ಕೆಂಚಾರ್ಲಹಳ್ಳಿ ಕ್ಲಸ್ಟರ್‍ನ ಸಿ.ಆರ್.ಪಿ. ಶ್ರೀನಾಥ್ ಅಭಿಪ್ರಾಯಪಟ್ಟರು.
ತಾಲೂಕು ಕನ್ನಡ ಸಾಹಿತ್ಯ ಬಳಗದ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ತಿಂಗಳ ಕವಿ ನೆನಪು ಕಾರ್ಯಕ್ರಮದಲ್ಲಿ ದಿಗತ ಕವಿ ಡಾ.ಕೆ.ಶಿವರಾಮ ಕಾರಂತರ ಕುರಿತು ಉಪನ್ಯಾಸ ನೀಡಿದ ಅವರು, ಸಂಪ್ರದಾಯಸ್ಥರ ಕುಟುಂಬದಲ್ಲಿ ಹುಟ್ಟಿದ ಕಾರಂತರು ಬಾಲ್ಯ ದಿಂದಲೇ ಕಂದಾಚಾರ, ಮೂಢನಂಬಿಕೆ, ಮೌಢ್ಯತೆ ಹಾಗೂ ಗೊಡ್ಡು ಸಂಪ್ರದಾಯಗಳನ್ನು ವಿರೋಧಿಸುತ್ತಾ ಬಂದರಲ್ಲದೆ, ವೈಜ್ಞಾನಿಕ ಮತ್ತು ಪ್ರಾಕೃತಿಕ ವಿಷಯಗಳ ಬಗ್ಗೆ ಆಸಕ್ತಿ ಹೊಂದಿ ವಿಜ್ಞಾನದ ಕುರಿತು ಬರಹಗಳನ್ನು ಬರೆಯುವುದರ ಮೂಲಕ ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮವನ್ನು ನೀಡಿ ಶ್ರೀಮಂತಗೊಳಿಸಿದರೆಂದರು.

ಗುಪ್ತಚರ ಇಲಾಖೆಯ ಕೆ.ವಿ.ಸುರೇಶ್ ಮಾತನಾಡಿ ಕವಿಗಳ ಮತ್ತು ಸಾಹಿತಿಗಳ ಬದುಕು-ಬರಹಗಳ ಕುರಿತು ತಿಳಿದುಕೊಂಡರೆ ಅವರುಗಳ ಬಗ್ಗೆ ಗೌರವ, ನಾಡು-ನುಡಿಯ ಬಗ್ಗೆ ಅಭಿಮಾನ ಮೂಡುವುದೆಂದು ಅಭಿಪ್ರಾಯಪಟ್ಟರಲ್ಲದೆ, ಬಳಗದ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಗದ ಗೌರವಾಧ್ಯಕ್ಷ ಬಿ.ವಿ.ರಾಮಚಂದ್ರಾರೆಡ್ಡಿ (ಸ್ವಾಮೀಜಿ) ಹಾಗೂ ಸಾಮಾಜಿಕ ಚಿಂ ತಕ ಸೈಯದ್ ನದೀಮ್ ರವರುಗಳು ಮಾನವೀಯ ಮೌಲ್ಯ ಹಾಗೂ ಸಾಹಿತ್ಯದ ಮಹತ್ವದ ಕುರಿತಾಗಿ ಹಿತವಚನ ನೀಡಿದರು. ಗಾನ ಕಲಾವಿದ ಎಸ್.ಎಫ್.ಎಸ್. ಸುರೇಶ್ ಕನ್ನಡ ಗೀತೆಗಳನ್ನು ಹಾಡಿ ಗಾನ ಸಿಂಚನಗೈದರು. ಬಳಗದ ಅಧ್ಯಕ್ಷ ನಂಜಪ್ಪರೆಡ್ಡಿ, ಉಪಾಧ್ಯಕ್ಷ ಜಿ.ವಿ.ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಶಿ.ಮ.ಮಂಜುನಾಥ್, ಪದಾಧಿಕಾರಿಗಳಾದ ಕೆ.ಎಸ್.ನೂರುಲ್ಲಾ, ರವಿ ಚಂದ್ರ, ಮೈಲಾಪುರ ಲೋಕೇಶ್, ಈಶ್ವರ್‍ಸಿಂಗ್, ಜೈನ್ ಮಂಜುನಾಥ್, ಸುನಿಲ್‍ಕುಮಾರ್, ಎಲ್.ನಾಗರಾಜ್, ವಿವೇಕ್ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin