ಕಷ್ಟ ಹೇಳಿಕೊಂಡು ಬಂದ ಅಂಧ ದಂಪತಿಗಳಿಗೆ ಆರ್ಥಿಕ ನೆರವು ನೀಡಿದ ಸಿಎಂ ಸಿದ್ದರಾಮಯ್ಯ
ಈ ಸುದ್ದಿಯನ್ನು ಶೇರ್ ಮಾಡಿ
ಮೈಸೂರು,ಜೂ.1-ಇಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಕಷ್ಟ ಹೇಳಿಕೊಂಡು ಬಂದ ಅಂಧ ದಂಪತಿಗಳಿಗೆ ಆರು ಸಾವಿರ ರೂ. ನೆರವು ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾನವೀಯತೆ ಮರೆದಿದ್ದಾರೆ. ಕೃಷ್ಣ ಮತ್ತು ಪೂರ್ಣಿಮಾ ಎಂಬ ದಂಪತಿಗಳು ಬೀದಿಯಲ್ಲಿ ಹಾಡು ಹೇಳಿ ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದರು.
ಆದರೆ ತಬಲ, ಹಾರ್ಮೋನಿಯಂ ಹಾಳಾಗಿದ್ದು , ಇದರಿಂದ ನಮ್ಮ ಜೀವನಕ್ಕೆ ತೊಂದರೆಯಾಗಿದೆ ಎಂದು ಮುಖ್ಯಮಂತ್ರಿ ಬಳಿ ಅಲವತ್ತುಕೊಂಡರು. ಇವರ ಕಷ್ಟಕ್ಕೆ ಸ್ಪಂದಿಸಿದ ಸಿಎಂ ಸ್ಥಳದಲ್ಲೇ ದಂಪತಿಗಳಿಗೆ ಆರು ಸಾವಿರ ನಗದು ನೀಡಿ, ಬಳಿಕ ದಂಪತಿಗಳಿಗೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOSb
Facebook Comments