ಕಸದ ತೊಟ್ಟಿಯಲ್ಲಿ ಮೃತ ನವಜಾತು ಶಿಶು ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Baby--01
ಚಿಂತಾಮಣಿ, ಏ.7- ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಕಸದ ತೊಟ್ಟಿಯಲ್ಲಿ ಮೃತಪಟ್ಟಿರುವ ನವಜಾತು ಶಿಶುವೊಂದು ಪತ್ತೆಯಾಗಿದೆ. ಕಳೆದ ಮಾರ್ಚ ಏಪ್ರಿಲ್ 24 ರಂದು ತಾಲೂಕಿನ ಕಸಬಾ ಹೋಬಳಿ ಗಡದಾನಹಳ್ಳಿ ಬಳಿ ಜೀವಂತ ಮಗುವನ್ನು ಮಣ್ಣಿನಲ್ಲಿ ಹೂತಿದ್ದ ಮಗುವನ್ನು ರಕ್ಷಣೆ ಮಾಡಿದ ಘಟನೆ ಇನ್ನೂ ಮಾಸದಿರುವಾಗಲೇ ಸರಕಾರಿ ಬಸ್ ನಿಲ್ದಾಣದ ಕಸದ ತೊಟ್ಟಿಯಲ್ಲಿ ಮೃತ ನವಜಾತು ಶಿಶು ಗೋಚರಿಸಿರುವುದು ನಗರದಾದ್ಯಂತ ಚರ್ಚಾ ವಿಷಯವಾಗಿದೆ.

ಬಸ್ ನಿಲ್ಧಾಣದಲ್ಲಿ ಹಣ್ಣು ಹಂಪಲು ಅಂಗಡಿ ಇಟ್ಟುಕೊಂಡಿರುವ ವ್ಯಾಪಾರಿಯೊಬ್ಬ ಕಸ ಗುಡಿಸಿದ ನಂತರ ಕಸವನ್ನು ಕಸದ ತೊಟ್ಟಿಯಲ್ಲಿ ಹಾಕಲು ಹೋದಾಗ ಮೃತಪಟ್ಟ ನವಜಾತು ಶಿಶುವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಇಟ್ಟಿರುವುದು ಗೋಚರಿಸಿದೆ. ಕೂಡಲೇ ಅವರು ಬಸ್ ನಿಲ್ಧಾಣದ ಘಟಕ ವ್ಯವಸ್ಥಾಪಕ ಶಂಕರ್ ರವರ ಗಮನಕ್ಕೆ ತಂದಿದ್ದು ಅವರು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದಿದ್ದಾರೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಇಲ್ಲಿನ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿ ಚಾರಕಿ ಜಕ್ಕವ್ವ, ಮಕ್ಕಳ ಸಹಾಯವಾಣಿ ಯೋಜನಾ ಸಂಯೋಜಕರಾದ ಸುನಿತಾ, ಆಂಜಪ್ಪ, ದೀಪಾ, ಮಹಿಳಾ ಸಾಂತ್ವನ ಕೇಂದ್ರದ ಕಾಮಾಕ್ಷಿ ಮತ್ತು ನಗರಠಾಣೆಯ ಪಿಎಸ್‍ಐ ಜಗದೀಶ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮೃತ ನವಜಾತು ಶಿಶುವನ್ನು ನಗರದ ಸಾರ್ವಜನಿಕ ಆಸ್ಪತ್ರೆಯ ಶವಾಗಾರದ ಕೊಠಡಿಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin