ಕಸಾಯಿಖಾನೆಗಳ ಮೇಲೆ ಎನ್‍ಜಿಟಿ ನಿಗಾ

ಈ ಸುದ್ದಿಯನ್ನು ಶೇರ್ ಮಾಡಿ

NGT

ನವದೆಹಲಿ, ಮೇ 28-ಪರಿಸರ ನಿಯಮಗಳನ್ನು ಉಲ್ಲಂಘಿಸುತ್ತಿರುವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳುತ್ತಾ ಸರ್ಕಾರಗಳಿಗೆ ಬಿಸಿ ಮುಟ್ಟಿಸುತ್ತಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್-ಎನ್‍ಜಿಟಿ) ಈಗ ಕಸಾಯಿಖಾನೆಗಳ ಮೇಲೆ ಹದ್ದಿನ ಕಣ್ಣಿನ ನಿಗಾ ಇಟ್ಟಿದೆ.  ಕಸಾಯಿಖಾನೆಗಳು ಘನ ತ್ಯಾಜ್ಯಗಳು ಹಾಗೂ ಸಂಸ್ಕರಣೆ ಮಾಡದ ಕಶ್ಮಲಗಳನ್ನು ಚರಂಡಿಗೆ ಹಾಕುತ್ತಿವೆ ಎಂಬ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಎನ್‍ಜಿಟಿ ಕೆಂಡಾಮಂಡಲವಾಗಿದೆ.


ಈ ಸಂಬಂಧ ಉತ್ತರಪ್ರದೇಶದ ಸರ್ಕಾರ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ನಿಯಮ ಉಲ್ಲಂಘಿಸುತ್ತಿರುವ ಕಸಾಯಿಖಾನೆಗಳು, ಕೇಂದ್ರ ಅಂತರ್ಜಲ ಪ್ರಾಧಿಕಾರ, ಮತ್ತು ಅಲಿಗಢ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ಎನ್‍ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಸ್ವತಂತ್ರಕುಮಾರ್ ನೋಟಿಸ್‍ಗಳನ್ನು ಜಾರಿಗೊಳಿಸಿ, ಜುಲೈ 19ರೊಳಗೆ ಪ್ರತ್ಯುತ್ತರ ನೀಡುವಂತೆ ಸೂಚಿಸಿದೆ.

ಭಾರೀ ಶಬ್ಧ, ಬಾಂಕ್ವೇಟ್ ಹಾಲ್‍ಗೆ ದಂಡ :

ಧ್ವನಿವರ್ಧಕಗಳ ಮೂಲಕ ಪಕ್ಕದ ಆಸ್ಪತ್ರೆಗೆ ಕಿರಿಕಿರಿ ಉಂಟು ಮಾಡುತ್ತಿದ್ದ ನೋಯ್ಡಾದ ಪಂಜಾಬಿ ಕ್ಲಬ್‍ಗೆ ಎನ್‍ಜಿಟಿ 7 ಲಕ್ಷ ರೂ.ಗಳ ದಂಡ ವಿಧಿಸಿದೆ.

Facebook Comments

Sri Raghav

Admin