ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಸುಗಳ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

HIRISEVE-2

ಹಿರೀಸಾವೆ, ಫೆ.4- ಪರವಾನಗಿ ಇಲ್ಲದೆ ಅಕ್ರಮವಾಗಿ ಹಸುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ ಇಬ್ಬರನ್ನು ಹಿರೀಸಾವೆ ಪೊಲೀಸರು ವಾಹನ ಸಮೇತ ಬಂಧಿಸಿ 5 ಹಸುಗಳನ್ನು ರಕ್ಷಿಸಿದ್ದಾರೆ.ಬೆಂಗಳೂರು ಗ್ರಾಮಾಂತರ ಜಿಲ್ಲೆ ಗೋಪಾಲಪುರ ಗ್ರಾಮದ ವಾಹನದ ಮಾಲೀಕ ಪಿಳ್ಳೇಗೌಡ (47) ಮತ್ತು ನರಸಿಂಹಪ್ಪ (60) ಬಂಧಿತ ಆರೋಪಿಗಳು ಚನ್ನರಾಯಪಟ್ಟಣದ ಪ್ರಾಣಿದಯಾ ಸಂಘದ ತಿಮ್ಮರಾಜು ಹಾಗೂ ಚೇತನ್‍ರವರು ಮಿನಿ ಗೂಡ್ಸ್ ವಾಹನದಲ್ಲಿ ಹಸುಗಳನ್ನು ಸಾಗಿಸುತ್ತಿದ್ದಾರೆ. ಈ ವಾಹನ ಚನ್ನರಾಯಪಟ್ಟಣದ ಕಡೆಯಿಂದ ಬರುತ್ತಿದೆ ಎಂಬ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದ ಹಿರೀಸಾವೆ ಪಿಎಸ್‍ಐ ಜಗದೀಶ್ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಪ್ರಜ್ವಲ್ ಡಾಬಾ ಬಳಿ ವಾಹನವನ್ನು ಅಡ್ಡಗಟ್ಟಿ ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಅಕ್ರಮವಾಗಿ ಹಸುಗಳನ್ನು ಸಾಗಿಸುತ್ತಿದ್ದುದು ಕಂಡುಬಂದಿತು.

ವಾಹನದಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು, ಚಿಕ್ಕ ಸ್ಥಳದಲ್ಲಿದ್ದ 5 ಹಸುಗಳನ್ನು ಗಾಡಿಯಿಂದ ಇಳಿಸಿ ಆರೈಕೆ ಮಾಡಲಾಯಿತು. ಇವುಗಳಲ್ಲಿ 3 ರಿಂದ 4 ವರ್ಷದ 2 ನಾಟಿ ಹಸುಗಳು, 1 ಸಿಂಧಿಹಸು, ಮತ್ತು ಸುಮಾರು 1 ವರ್ಷದ 2 ನಾಟಿ ಹೆಣ್ಣುಕರುಗಳು ಇದ್ದವು, ಇವುಗಳನ್ನು ಒಂದರ ಮೇಲೊಂದರಂತೆ ತುಂಬಲಾಗಿತ್ತು. ಇಬ್ಬರು ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಹಸುಗಳನ್ನು ಮೈಸೂರಿನ ಪಿಂಜರಪೋಲ್ ಗೋಶಾಲೆಗೆ ಕಳುಹಿಸಲಾಗಿದೆ ಎಂದು ಪಿಎಸ್‍ಐ ಜಗಧೀಶ್ ತಿಳಿಸಿದರು.  ಈ ಕಾರ್ಯಚರಣೆಯಲ್ಲಿ ಪಿಎಸ್‍ಐ ಜೊತೆಯಲ್ಲಿ ಪೊಲೀಸ್ ಸಿಬ್ಬಂದಿ ಹರೀಶ್, ದಿಲೀಪ್, ಸುಬ್ರಹ್ಮಣ್ಯ, ಲೋಕೇಶ್, ರವಿಕುಮಾರ್, ಚೇತನ್ ಇವರುಗಳು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin