ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಹಸುಗಳ ರಕ್ಷಣೆ : ಪೊಲೀಸರು ವಶ
ಕಡೂರು, ಮಾ.18- ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಹಸುಗಳನ್ನು ಕಡೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಗಂಡಸಿ ಗ್ರಾಮದ ಚಂದ್ರು ಮತ್ತು ಗಿರೀಶ್ ಎಂಬುವರು ಕೋರಿಯರ್ ಸಾಗಿಸುವ ಕ್ಯಾಂಟರ್ ಲಾರಿಯಲ್ಲಿ 18 ಹಸು ಹಾಗೂ 2 ಎಮ್ಮೆಗಳನ್ನು ಆಕ್ರಮವಾಗಿ ತಾಲೂಕಿನ ಸಿಂಗಟಗೆರೆ-ಬೆಲಗೂರು ಮಾರ್ಗವಾಗಿ ಹುಬ್ಬಳ್ಳಿಗೆ ಸಾಗಿಸುತ್ತಿದ್ದರು.ಖಚಿತ ಮಾಹಿತಿ ಮೇರೆಗೆ ಕಡೂರು ಪೊಲೀಸರು ತಂಗಲಿ ಗ್ರಾಮದ ಬಳಿ ವಾಹನ ತಡೆದು ಪರಿಶೀಲನೆ ನಡೆಸಿ, ವಾಹನವನ್ನು ವಶಪಡಿಸಿಕೊಂಡು ಅದರಲ್ಲಿದ್ದ ಜಾನುವಾರುಗಳನ್ನು ರಕ್ಷಿಸಿ ಬಾಣಾವಾರ ಸಮೀಪದ ಜೈನ್ ಗೋಶಾಲೆಗೆ ಕಳುಹಿಸಿದರು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಪೊಲೀಸ್ ವೃತ್ತ ನಿರೀಕ್ಷಕ ಕೆ.ಸತ್ಯನಾರಾಯಣ್ ಮಾರ್ಗದರ್ಶನದಲ್ಲಿ ಆರಕ್ಷಕ ಉಪ ನಿರೀಕ್ಷಕ ಸಿ. ರಾಕೇಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಆರಕ್ಷಕ ಸಹಾಯಕ ನಿರೀಕ್ಷಕಿ ಲೀಲಾವತಿ, ಸಿಬ್ಬಂದಿಗಳಾದ ಉಮೇಶ್, ಚಿದಾನಂದ್, ಪ್ರದೀಪ್ ಉಪಸ್ಥಿತರಿದ್ದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS