ಕಾಂಗೋ ಸೇನಾಪಡೆಗೆ ಸೇರಿದ ಮಿಲಿಟರಿ ವಿಮಾನ ಪತನ : 30 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Plane-Crash--02

ಕಿನ್‍ಶಾಸ(ಕಾಂಗೊ), ಅ.1-ಕಾಂಗೋ ಸೇನಾಪಡೆಗೆ ಸೇರಿದ ಮಿಲಿಟರಿ ವಿಮಾನವೊಂದು ಕಿನ್‍ಶಾಸ ಬಳಿ ನಿನ್ನೆ ಪತನಗೊಂಡು 30ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಅಂಟೋನೊವ್ ಸೇನಾ ಸಾಗಣೆ ವಿಮಾನವು ಗಗನಕ್ಕೇರಿದ ಕೆಲ ಹೊತ್ತಿನಲ್ಲೇ ಅಪಘಾತಕ್ಕೀಡಾಯಿತು. ಈ ವಿಮಾನದಲ್ಲಿ ಹಲವು ಮಂದಿ ಇದ್ದರು. ಪತನಗೊಂಡ ವಿಮಾನ ದುರಂತದಲ್ಲಿ 30ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ಧಾರೆ ಎಂದು ಮಿಲಿಟರಿ ಮತ್ತು ವಿಮಾನನಿಲ್ದಾಣ ಮೂಲಗಳು ತಿಳಿಸಿವೆ.

ಕಾಂಗೊ ರಾಜಧಾನಿ ಕಿನ್‍ಶಾಸಗೆ ಪೂರ್ವ ದಿಕ್ಕಿಲ್ಲಿ 100 ಕಿ.ಮೀ. ದೂರದ ಸೆಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ವಿಮಾನದಲ್ಲಿದ್ದ ಯಾರೂ ಬದುಕುಳಿಸಿರುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ರಷ್ಯಾ ಸಿಬ್ಬಂದಿ, ಯೋಧರು ಇದ್ದ ಈ ವಿಮಾನದಲ್ಲಿ ಎರಡು ವಾಹನಗಳು ಹಾಗೂ ಅಪಾರ ಶಸ್ತ್ರಾಸ್ತ್ರಗಳನ್ನು ಸಹ ಕೊಂಡೊಯ್ಯಲಾಗುತ್ತಿತ್ತು.  ಈ ಘಟನೆ ¨ಗ್ಗೆ ಕಾಂಗೋ ಸೇನೆ ತನಿಖೆಗೆ ಆದೇಶ ನೀಡಿದೆ.

Facebook Comments

Sri Raghav

Admin