ಕಾಂಗ್ರೆಸ್ ನ ಯುವರಾಜನಿಗೂ ತಟ್ಟಿತು ನೋಟು ನಿಷೇಧದ ಬಿಸಿ

ಈ ಸುದ್ದಿಯನ್ನು ಶೇರ್ ಮಾಡಿ

Rahul-Gandhi

ನವದೆಹಲಿ ನ.11 : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೂ 500 ಹಾಗೂ 1000 ರುಪಾಯಿ ನೋಟ್ ನಿಷೇಧದ ಬಿಸಿ ತಟ್ಟಿದ್ದು, ನೋಟ್ ಬದಲಾವಣೆಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ತೆರಳಿ ಜನಸಾಮಾನ್ಯರಂತೆ ಸರತಿಯಲ್ಲಿ ನಿಂತುಕೊಂಡಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ ಸಾಮಾನ್ಯರ ಕಷ್ಟ ಅರ್ಥವಾಗುವುದಿಲ್ಲ. ‘ಜನ ಸಾಮಾನ್ಯರ ಕಷ್ಟ ನರೇಂದ್ರ ಮೋದಿ ಅವರಿಗೆ ಅರ್ಥವಾಗುತ್ತಿಲ್ಲ. ಜನರ ಕಷ್ಟ ತಿಳಿಯಲು ನಾನು ಬ್ಯಾಂಕಿಗೆ ಬಂದಿದ್ದೇನೆ’ ಎಂದರು. ಕೇಂದ್ರದ ಈ ನಿರ್ಧಾರದಿಂದಾಗಿ ಬಡವರು ಪರದಾಡುವಂತಾಗಿದೆ. ಸೂಟ್, ಬೂಟ್ ಧರಿಸಿದ ಕೋಟ್ಯಾಧೀಶರು ಯಾರಾದರೂ ಕ್ಯೂನಲ್ಲಿದ್ದಾರೆಯೇ? ಹಾಗಾದರೆ ಸರ್ಕಾರ ಯಾರಿಗಾಗಿ ಹೊಸ ಕಾನೂನು ತಂದಿದೆ? ಎಂದು ಪ್ರಶ್ನಿಸಿದರು. ಮೋದಿ ಸರ್ಕಾರ ಕೇವರ 15-20 ಮಂದಿಗಾಗಿ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

500 ಹಾಗೂ 1,000 ರು ಮುಖಬೆಲೆ ನೋಟುಗಳು ರದ್ದಾದ ಬೆನ್ನಲ್ಲೇ ಹೊಸ ನೋಟುಗಳನ್ನು ಪಡೆಯಲು ಬ್ಯಾಂಕಿಗೆ ಸಾರ್ವಜನಿಕರು ಮುಗಿಬೀಳುತ್ತಿದ್ದಾರೆ. ಆದರೆ, ಜನರ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಬ್ಯಾಂಕುಗಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅನೇಕ ಕಡೆ ಗೊಂದಲ, ಘರ್ಷಣೆ ಉಂಟಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin