ಕಾಂಗ್ರೆಸ್ ಬೆನ್ನುಬಿದ್ದ ಐಟಿ, ಬಾದಾಮಿಯಲ್ಲಿ ಆನಂದ್‍ಸಿಂಗ್ ಒಡೆತನದ ರೆಸಾರ್ಟ್ ಮೇಲೆ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

IT-Raid--01

ಬಾದಾಮಿ, ಮೇ 8- ಇಲ್ಲಿನ ಹೊರ ವಲಯದ ಕೃಷ್ಣ ಹೆರಿಟೇಜ್ ರೆಸಾರ್ಟ್ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಕೆಲ ಕಾಗದ ಪತ್ರಗಳು ಹಾಗೂ 11 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಈ ರೆಸಾರ್ಟ್‍ನಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದ್ದು , ಸುಮಾರು 10 ತಾಸುಗಳ ಕಾಲ ತಪಾಸಣೆ ವೇಳೆ ಏನೇನು ಸಿಕ್ಕಿದೆ ಎಂಬುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿದ್ದರೂ ಹಣ ಮತ್ತು ದಾಖಲೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

IT-Raid--05

ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಪ್ರಸ್ತುತ ವಿಜಯನಗರ ಕ್ಷೇತ್ರದಿಂದ ಸ್ಪರ್ಧಿಸಿರುವ ಆನಂದ್‍ಸಿಂಗ್ ಅವರ ಒಡೆತನದ ರೆಸಾರ್ಟ್ ಇದಾಗಿದ್ದು , ಸ್ವತಃ ಐಟಿ ಉಪ ನಿರ್ದೇಶಕರೇ ಇಲ್ಲಿಗೆ ಬಂದಿರುವುದು ಕುತೂಹಲ ಕೆರಳಿಸಿದೆ. ಸುಮಾರು 10ಕ್ಕೂ ಹೆಚ್ಚು ಅಧಿಕಾರಿಗಳು ಇದ್ದರೂ ಬೆಳಗ್ಗೆ 9 ಗಂಟೆ ವೇಳೆಗೆ ಎಲ್ಲರೂ ಇಲ್ಲಿಗೆ ತೆರಳಿದರು ಎಂದು ರೆಸಾರ್ಟ್‍ನ ಸಿಬ್ಬಂದಿಗಳು ತಿಳಿಸಿದ್ದಾರೆ.

IT-Raid--04

ಏನು ಗೊತ್ತಿಲ್ಲ: ನಾನು ಹಾಗೂ ಎಸ್.ಆರ್.ಪಾಟೀಲ್ ಊಟ ಮಾಡಲೆಂದು ಹೋಗಿದ್ದೆವು. ನಮ್ಮನ್ನು ಐಟಿ ಅಧಿಕಾರಿಗಳು ಏನು ಪ್ರಶ್ನಿಸಿರಲಿಲ್ಲ. ಸುಮ್ಮನೆ ಕೂತಿದ್ದರು. ನಮ್ಮನ್ನು ಎರಡು ಗಂಟೆ ನಂತರ ತೆರಳಿ ಎಂದು ಹೇಳಿದರು ಎಂದು ಸಿ.ಎಂ.ಇಬ್ರಾಹಿಂ ತಿಳಿಸಿದ್ದಾರೆ. ಒಳಗಡೆ ಏನು ಸಿಕ್ಕಿಲ್ಲ. ಐಟಿ ಅಧಿಕಾರಿಗಳು ಸುಮ್ಮನೆ ಬಂದು ಕೂತಿದ್ದರು ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೊಂದೆಡೆ ಪ್ರವಾಸೋದ್ಯಮ ಇಲಾಖೆಯ ಮಯೂರ ಹೊಟೇಲ್‍ನಲ್ಲಿ ಸುಮಾರು 16 ಲಕ್ಷ ಹಣ ಪತ್ತೆಯಾಗಿದ್ದು , ಇದು ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

IT-Raid--02

Facebook Comments

Sri Raghav

Admin