ಕಾಂಗ್ರೆಸ್ ಸಂಘಟನೆಗೆ ನವೆಂಬರ್‍ನಲ್ಲಿ ಮುಖಂಡರ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

kr--nagar

ಕೆ.ಆರ್.ನಗರ, ಅ.25- ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವನ್ನು ಪ್ರಬಲವಾಗಿ ಸಂಘಟಿಸಲು ನವೆಂಬರ್ ತಿಂಗಳ ಮೊದಲ ವಾರದಲ್ಲಿ ತಾಲೂಕು ಮಟ್ಟದ ಕಾರ್ಯಕರ್ತರು ಮತ್ತು ಮುಖಂಡರ ಸಭೆಯನ್ನು ನಡೆಸಲಾಗುತ್ತದೆ ಎಂದು ಮಾಜಿ ಸಂಸದ ಅಡಗೂರು ಹೆಚ್.ವಿಶ್ವನಾಥ್ ಹೇಳಿದರು.ಪಟ್ಟಣದ ಶ್ರೀಅರ್ಕೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕಾರ್ಯಕರ್ತರಿಗೆ ಹುಮ್ಮಸ್ಸು ನೀಡುವ ಉದ್ದೇಶದಿಂದ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಲಾಗುತ್ತದೆ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ದೇಶದ ಎಲ್ಲಾ ಜಾತಿ-ಜನಾಂಗದ ಜನತೆಯೇ ಮಾಲೀಕರೇ ಹೊರೆತು ಸೋನಿಯಾಗಾಂಧಿ ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲ. ದೊಡ್ಡ ಪ್ರಮಾಣದ ಕಾರ್ಯಕರ್ತರ ಪಕ್ಷ ಕಾಂಗ್ರೆಸ್ ಎಂದ ವಿಶ್ವನಾಥ್ ಮಾಜಿ ಸಚಿವ ಶ್ರೀನಿವಾಸ್‍ಪ್ರಸಾದ್ ಪಕ್ಷಕ್ಕೆ ದೊಡ್ಡ ಆಸ್ತಿಯಾಗಿದ್ದರು. ಅವರನ್ನು ಪಕ್ಷ ಉಳಿಸಿಕೊಳ್ಳಬೇಕಾಗಿತ್ತು. ಈ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ಅವರ ಮನವೊಲಿಸುವಲ್ಲಿ ವಿಫಲಗೊಂಡಿದ್ದಾರೆ. ಇದರಿಂದ ಪಕ್ಷಕ್ಕೆ ನಷ್ಟ ಎಂದು ತಿಳಿಸಿದರು.

ತಮ್ಮ ಆರೋಗ್ಯ ವಿಚಾರಿಸಿ ಶುಭಾಶಯ ಕೋರಲು ಆಗಮಿಸಿದ ಶಾಸಕ ಸಾ.ರಾ.ಮಹೇಶ್ ಹಾಗೂ ಜೆಡಿಎಸ್ ಮುಖಂಡರುಗಳನ್ನು ವಿಶ್ವನಾಥ್ ಮುಕ್ತ ಕಂಠದಿಂದ ಶ್ಲಾಘಿಸಿದರು. ತಾ.ಪಂ ಅಧ್ಯಕ್ಷ ಹೆಚ್.ಟಿ.ಮಂಜುನಾಥ್, ಸದಸ್ಯ ಜಿ.ಎಸ್.ಮಂಜುನಾಥ್, ಸಿದ್ದಮ್ಮದೇವರಾಜು, ವಕ್ತಾರ ಜಾಬೀರ್, ಪುರಸಭಾ ಸದಸ್ಯರಾದ ಕೋಳಿಪ್ರಕಾಶ್, ಪ್ರಭುಶಂಕರ್, ಸುಬ್ರಹ್ಮಣ್ಯ, ಕೆ.ವಿನಯ್, ಹೆಚ್.ಸಿ.ರಾಜು, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಜಿ.ಎಂ.ಹೇಮಂತ್, ಮಾಜಿ ಅಧ್ಯಕ್ಷ ತಮ್ಮನಾಯಕ, ಸದಸ್ಯ ಸೈಯದ್‍ಅಸ್ಲಾಂ, ಮುಖಂಡರಾದ ಡಾ.ಮೆಹಬೂಬ್‍ಖಾನ್, ಪರಶುರಾಮು, ಹೆಚ್.ಡಿ.ರಾಘವೇಂದ್ರ, ಕೆ.ಪಿ.ಜಗದೀಶ್, ಟೋಪಿಮಹದೇವ್ ಮತ್ತಿತರರು ಇದ್ದರು.

► Follow us on –  Facebook / Twitter  / Google+

 

Facebook Comments

Sri Raghav

Admin