ಕಾಂಗ್ರೆಸ್ ಹಿರಿಯ ಮುಖಂಡನ ಮೇಲೆ ಹಲ್ಲೆ

ಈ ಸುದ್ದಿಯನ್ನು ಶೇರ್ ಮಾಡಿ

3
ಮುದ್ದೇಬಿಹಾಳ,ನ.5- ಪ್ರಥಮ ದರ್ಜೆ ಗುತ್ತಿಗೆದಾರ, ಕಾಂಗ್ರೆಸ್ ಹಿರಿಯ ಮುಖಂಡ ನೀಲಕಂಠರಾವ ಎಸ್. ದೇಶಮುಖ ಕುಂಚಗನೂರ ಮೇಲೆ ಪಿಡಿಓ ಸಂಘದ ಅಧ್ಯಕ್ಷ ಸಂಗಯ್ಯ ಹಿರೇಮಠ ಇಂದಿಲ್ಲಿ ಹಲ್ಲೆ ನಡೆಸಿರುವ ಘಟನೆ ಜರುಗಿದೆ.ಕುಂಚಗನೂರ ಅವರನ್ನುಕೂಡಲೇ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ಶಾಸಕ ಸಿ.ಎಸ್. ನಾಡಗೌಡರ ಆಪ್ತರೂ ಆಗಿದ್ದ ದೇಶಮುಖ ಅವರಿಗೂ ಮತ್ತು ಸಂಗಯ್ಯ ಹಿರೇಮಠ ಅವರಿಗೂ ರಸ್ತೆ ಕಾಮಗಾರಿ ವಿಷಯದಲ್ಲಿ ಇಬ್ಬರ ಮಧ್ಯೆ ವಾಗ್ವಾದ, ಜಟಾಪಟಿ ನಡೆದು ಪರಿಸ್ಥಿತಿ ಹಲ್ಲೆ ರೂಪ ಪಡೆಯಿತು ಎನ್ನಲಾಗಿದೆ.ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ನಂತರ ಮುಂದಿನ ಕ್ರಮಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin