ಕಾಜೋಲ್ ಆಂಟಿ ಮೇಲೆ ರೋಹಿತ್ ಕಣ್ಣು

ಈ ಸುದ್ದಿಯನ್ನು ಶೇರ್ ಮಾಡಿ

kajol
ಬಾಲಿವುಡ್ ಯಶಸ್ವಿ ನಿರ್ದೇಶಕ ರೋಹಿತ್ ಶೆಟ್ಟಿ ಕಣ್ಣು ಈಗ ಕಾಜೋಲ್ ಆಂಟಿ ಮೇಲೆ ಬಿದ್ದಿದೆ. ಇದೇನು ಕಾಕದೃಷ್ಟಿಯೂ ಅಲ್ಲ, ವಕ್ರದೃಷ್ಟಿಯೂ ಅಲ್ಲ, ಕೆಟ್ಟ ದೃಷ್ಟಿಯಂತೂ ಅಲ್ಲವೇ ಅಲ್ಲ. ಕಾಜೋಲ್‌ನನ್ನು ಕಾಮಿಡಿ ಫ್ಯಾಮಿಲಿ ಡ್ರಾಮಾದಲ್ಲಿ ತೋರಿಸಬೇಕೆಂಬ ಇರಾದೆ ಈತನದು. ಅಜಯ್ ದೇವಗನ್ ಮತ್ತು ಕಾಜೋಲ್ ತಾರಾ ದಂಪತಿಗಳು. ಅವರಿಬ್ಬರು ದಂಪತಿಯಾಗಿ ಒಂದು ಕಾಮಿಡಿ ಫಿಲ್ಮ್‌ನಲ್ಲಿ ನಟಿಸಿದರೆ ಹೇಗೆ ಎಂಬ ಆಲೋಚನೆ ಈ ನಿರ್ದೇಶಕನಿಗೆ ಹೊಳೆದಿದೆ. ಅಜಯ್ ಮತ್ತು ಕಾಜೋಲ್, ರೋಹಿತ್‌ಗೇನು ಹೊಸಬರಲ್ಲ. ಅಜಯ್‌ಗಾಗಿ ಗೋಲ್‌ಮಾಲ್ ಮತ್ತು ಸಿಂಗಂ ಸಿನಿಮಾಗಳಿಗೆ ಆಕ್ಷನ್-ಕಟ್ ಹೇಳಿರುವ ರೋಹಿತ್, ಕಾಜೋಲ್ ಜೊತೆ ದಿಲ್‌ವಾಲೆ ಚಿತ್ರದಲ್ಲಿ ಕೆಲಸ ಮಾಡಿದ್ದಾನೆ.

90ರ ದಶಕದಲ್ಲಿ ತೆರೆಕಂಡ ಅಜಯ್ ಮೊದಲ ಚಿತ್ರ ಫೂಲ್ ಔರ್ ಕಾಂಟೆ ಸಿನಿಮಾಗೆ ರೋಹಿತ್ ಅಸಿಸ್ಟಂಟ್ ಡೈರೆಕ್ಟರ್ ಆಗಿದ್ದ. ಆಗಿನಿಂದಲೂ ಇವರಿಬ್ಬರು ಫ್ರೆಂಡ್ಸ್. ಹಾಗಾಗಿ ಈ ತಾರಾದಂಪತಿಯನ್ನು ಮತ್ತೆ ಕಾಮಿಡಿ ಕಾನ್ಸೆಪ್ಟ್ ಸಿನಿಮಾದಲ್ಲಿ ಒಟ್ಟಿಗೆ ಸ್ವಿಲ್ವರ್ ಸ್ಕ್ರೀನ್ ಮೇಲೆ ಮಿಂಚಿಸುವ ಪ್ರಾಜೆಕ್ಟ್ ರೆಡಿ ಆಗುತ್ತಿದೆ. ಇವರಿಬ್ಬರ ವಯೋಮಾನಕ್ಕೆ ತಕ್ಕದಾದ ಕಥೆ ಸೃಷ್ಟಿಯಾಗುತ್ತದೆ. ಈ ಜೋಡಿಯನ್ನು ತೆರೆ ಮೇಲೆ ನೋಡಲು ಸ್ವಲ್ಪ ಸಮಯ ಬೇಕಾಗಬಹುದು.

► Follow us on –  Facebook / Twitter  / Google+

Facebook Comments

Sri Raghav

Admin