ಕಾಟ ಕೊಡುವ ಮಕ್ಕಳನ್ನು ಮನೆಯಿಂದ ಹೊರಹಾಕಬಹುದು : ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು

ಈ ಸುದ್ದಿಯನ್ನು ಶೇರ್ ಮಾಡಿ

Delhi-High-Court

ನವದೆಹಲಿ, ಮಾ.19-ತಮ್ಮ ತಂದೆತಾಯಿಗಳು ಮತ್ತು ಪೋಷಕರನ್ನು ನಿಂದಿಸುವ ಮತ್ತು ಕಾಟ ಕೊಡುವ ವಯಸ್ಕ ಮಕ್ಕಳನ್ನು ಮನೆಯಿಂದ ತೆರವುಗೊಳಿಸಬಹುದು ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಲ್ಲದೇ ಹಿರಿಯ ನಾಗರಿಕರು ಅಥವಾ ಪೋಷಕರು ಘನತೆಯೊಂದಿಗೆ ಶಾಂತಿ-ನೆಮ್ಮದಿಯಿಂದ ಬದುಕುವ ಹಕ್ಕು ಹೊಂದಿರುತ್ತಾರೆ ಎಂಬುದನ್ನು ಕೋರ್ಟ್ ಎತ್ತಿ ಹಿಡಿದಿದೆ.   ಪೋಷಕರ ಮನೆಯಲ್ಲೇ ಇದ್ದುಕೊಂಡು ಅವರನ್ನು ನಿಂದಿಸುವ ಮತ್ತು ಕಾಟಕೊಡುವ ಮಕ್ಕಳನ್ನು ಸ್ವತ್ತಿನಿಂದ ತೆರವುಗೊಳಿಸಬಹುದಾಗಿದೆ ಎಂದು ನ್ಯಾಯಮೂರ್ತಿ ಮನಮೋಹನ್ ತೀರ್ಪು ನೀಡಿದ್ದಾರೆ.

ಪೋಷಕರು ಸ್ವಯಾರ್ಜಿತ ಆಸ್ತಿ ಹೊಂದಿರಲಿ ಅಥವಾ ಹೊಂದಿಲ್ಲದೇ ಇರಲಿ, ಸ್ವತ್ತಿನ ಮೇಲೆ ಎಲ್ಲಿಯವರೆಗೆ ಅವರು ಕಾನೂನು ಸುಪರ್ದಿ ಹೊಂದಿರುತ್ತಾರೆ. ಅಲ್ಲಿಯವರೆಗೆ ಈ ತೀರ್ಪು ಅನ್ವಯಿಸುತ್ತದೆ. ತಂದೆ-ತಾಯಿಗಳ ಮನೆಯಲ್ಲಿದ್ದುಕೊಂಡು ಅವರನ್ನೇ ನಿಂದಿಸುವಂಥ ಮಕ್ಕಳನ್ನು ಅಲ್ಲಿಂದ ಹೊರಹಾಕಬಹುದಾಗಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.   ವಯೋವೃದ್ಧ ಮತ್ತು ರೋಗಪೀಡಿತ ಪೋಷಕರನ್ನು ನಿಂದಿಸಿ ಕಾಟಕೊಡುತ್ತಿದ್ದ ಮದ್ಯವ್ಯಸನಿ ಮಾಜಿ ಪೊಲೀಸ್ ಪೇದೆ ಮತ್ತು ಆತನ ಸಹೋದರನನ್ನು ಮನೆಯಿಂದ ತೆರವುಗೊಳಿಸಬೇಕು ಎಂದು ಅಕ್ಟೋಬರ್ 2015ರಲ್ಲಿ ಪರಿಹಾರ ನಿರ್ವಹಣಾ ನ್ಯಾಯಾಧಿಕರಣ ನೀಡಿದ್ದ ಆದೇಶ ಪ್ರಶ್ನಿಸಿ ಈ ಇಬ್ಬರು ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಾಧಿಕರಣದ ತೀರ್ಪನ್ನು ನ್ಯಾಯಮೂರ್ತಿ ಮನಮೋಹನ್ ಎತ್ತಿ ಹಿಡಿದಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin