ಕಾಡಾನೆ ದಾಳಿಗೆ ಫಸಲು ನಾಶ,  ಕಂಗೆಟ್ಟ ರೈತನಿಂದ ಅಧಿಕಾರಿ ವರ್ಗಕ್ಕೆ ಹಿಡಿ ಶಾಪ

ಈ ಸುದ್ದಿಯನ್ನು ಶೇರ್ ಮಾಡಿ

ಹನೂರು, ಜೂ. 3- ರಾತ್ರಿಯಾಗುತ್ತಿದ್ದಂತೆ ಪ್ರತಿದಿನ ಕಾಡಾನೆಗಳು ಜಮೀನಿಗೆ ಲಗ್ಗೆ ಇಟ್ಟು ಕಟಾವಿಗೆ ಬಂದಿರುವ ಕಬ್ಬಿನ ಫಸಲನ್ನು ತಿಂದು ಅಪಾರ ಬೆಳೆಯನ್ನು ತುಳಿದು ನಾಶ ಮಾಡುತ್ತಿದ್ದರೂ ನಮ್ಮ ಮೇಲೆ ಕರುಣೆ ಇಲ್ಲದಂತೆ ವರ್ತಿಸುತ್ತಿರುವ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರು ಬೇಸತ್ತಿದ್ದಾರೆ.

ಹನೂರು ತಾಲ್ಲೂಕು ಕೇಂದ್ರ ಹಾಗೂ ಪಟ್ಟಣದ ನಿವಾಸಿಯಾಗಿರುವ ಬಡ ರೈತ ಮಹದೇವನಿಗೆ ಸಮೀಪ ಕಾಡಂಚಿನ ಪ್ರದೇಶದಲ್ಲಿ ಜಮೀನಿದ್ದು, ಸುಮಾರು 02 ಏಕರೆ ಭೂಮಿಯಲ್ಲಿ ಕಬ್ಬು ಬೆಳೆ ಬೆಳೆದಿದ್ದು, ಇನ್ನೂ ಒಂದುವರೆ ತಿಂಗಳಲ್ಲಿ ಫಸಲು ಕೈಗೆ ಸಿಗುವ ನಿರೀಕ್ಷೆಯಲ್ಲಿದ್ದಾಗ.

ಅದರೆ ಪ್ರತಿ ದಿನ ರಾತ್ರಿ ಯಾಗುತ್ತಿದ್ದಂತೆ ಆನೆಗಳು ಜಮೀನಿಗೆ ಲಗ್ಗೆ ಇಟ್ಟು ಹೊಂಡದಲ್ಲಿ ನೀರು ಕುಡಿದು ಕೈಗೆ ಬಂದಿರುವ ಫಸಲನ್ನು ತಿಂದು ಲದ್ದಿಯಿಟ್ಟು ಅಪಾರ ಪ್ರಮಾಣದಲ್ಲಿ ಬೆಳೆ ನಾಶ ಪಡಿಸುತ್ತಲೇ ಇವೆ. ಎಷ್ಟು ಭಾರಿ ಅರಣ್ಯಾಧಿಕಾರಿಗಳಿಗೆ ವಿಷಯ ಗಮನಕ್ಕೆ ತಂದರೂ ಏನು ಪ್ರಯೋಜನ ಆಗುತ್ತಿಲ್ಲ.

ಈ ಹಿಂದೆಯೂ ಸಹ ರಾಗಿ ಬೆಳೆ ಬೆಳೆದಿದ್ದಾಗ ಇದೇ ರೀತಿ ಕಾಡಾನೆಗಳು ನಾಶ ಮಾಡಿ ಸ್ವಲ್ಪವೂ ಕೂಡ ರಾಗಿ ಬೆಳೆ ಕೈಗೆ ಸಿಗಲಿಲ್ಲ. ಈಗಾಲೂ ಇದೇ ರೀತಿ ಆಗುತ್ತಿದ್ದು ಅರಣ್ಯಾಧಿಕಾರಿಗಳಲ್ಲಿ ಅಲವು ಭಾರಿ ಮನವಿ ಮಾಡಿದರೂ ಈ ಕಡೆ ಗಮನ ಹರಿಸುತ್ತಿಲ್ಲ.

ಹೀಗೆ ಇವರ ನಡವಳಿಕೆ ಮುಂದುವರಿದರೆ ಕುಟುಂಬ ಸಹಿತ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಈಗಾಗಲೇ ಹನೂರು ಕೃಷಿ ಪತ್ತಿನ ಸಹಕಾರ ಸಂಘದ ಬ್ಯಾಂಕ್‍ನಲ್ಲಿ 2 ಲಕ್ಷ ರೂ. ಹಾಗೂ ಜನರಿಂದ ಕೈ ಸಾಲ ಪಡೆದಿದ್ದು ಜೀವನ ಕಷ್ಟ ಎಂದು ಅಳಲು ತೋಡಿಕೊಂಡಿದ್ದಾರೆ. ಅಧಿಕಾರಿಗಳು ಕಾಡಾನೆ ದಾಳಿಯಿಂದ ಫಸಲು ರಕ್ಷಣೆ ಮಾಡಿಕೊಟ್ಟರೆ ಮುಂದಿನ ಜೀವನೋಪಾಯಕ್ಕೆ ಆಧಾರವಾಗುತ್ತದೆ ಎಂದಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ