ಕಾಡಾನೆ ಸಿದ್ದನ ಸ್ಥಿತಿ ಚಿಂತಾಜನಕ, ಬದುಕೋದು ಡೌಟ್

ಈ ಸುದ್ದಿಯನ್ನು ಶೇರ್ ಮಾಡಿ

Sidda-01

ರಾಮನಗರ,ಅ.28-ಕಳೆದ 50 ದಿನಗಳಿಂದ ಕಾಲು ಮುರಿದುಕೊಂಡು ನರಳುತ್ತಿದ್ದ ಕಾಡಾನೆ ಸಿದ್ದನ ಸ್ಥಿತಿ ಇಂದು ಚಿಂತಾಜನಕವಾಗಿದ್ದಾನೆ. ಮಂಚಿನಬೆಲೆ ಡ್ಯಾಂ ಬಳಿ ಕಾಲುವೆಗೆ ಬಿದ್ದು ಬಲಗಾಲು ಮುರಿದುಕೊಂಡು 50 ದಿನಕ್ಕೂ ಹೆಚ್ಚು ಕಾಲ ರಾಗಿಹೊಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ದನ ಸ್ಥಿತಿ ಚಿಂತಾಜನಕವಾಗಿದೆ.  ನಿನ್ನೆ ಮಧ್ಯ ರಾತ್ರಿ ಜೋಳ, ನೀರು ಸೇವಿಸಿದ ಸಿದ್ಧ ಚೇತರಿಸಿಕೊಂಡಿದ್ದಾನೆ ಎಂದು ಭಾವಿಸಲಾಗಿತ್ತು. ಆದರೆ ಇಂದು ಆನೆ ಸಿದ್ದ ಏನೂ ಸೇವಿಸದೆ ಚಿಂತಾಜನಕವಾಗಿದ್ದಾನೆ. ಸಿದ್ದನಿಗೆ 100 ಲೀಟರ್ ನೀರಿನಲ್ಲಿ ಸಕ್ಕರೆ ನೀರು, ಒಆರ್‍ಎಸ್ ನೀಡಲಾಗುತ್ತಿದ್ದು , ಸಂಪೂರ್ಣ ನಿತ್ರಾಣಗೊಂಡಿದ್ದಾನೆ.

► Follow us on –  Facebook / Twitter  / Google+

Facebook Comments

Sri Raghav

Admin