ಕಾಡಿನತ್ತ ಪಯಣ ಬೆಳಸಿದ ದಸರಾ ಗಜಪಡೆ

ಈ ಸುದ್ದಿಯನ್ನು ಶೇರ್ ಮಾಡಿ

Arjuna-Dasara-Mysuru

ಮೈಸೂರು,ಅ.3- ಜಂಬುಸವಾರಿಯಲ್ಲಿ ಪಾಲ್ಗೊಂಡು ನಂತರ ರಿಲ್ಯಾಕ್ಸ್ ಮೂಡ್‍ನಲ್ಲಿದ್ದ ಗಜಪಡೆ ಇಂದು ಕಾಡಿನತ್ತ ಪಯಣ ಬೆಳಸಿದವು. ಅರಮನೆಯಲ್ಲಿ ಬೀಡುಬಿಟ್ಟಿದ್ದ ಆನೆಗಳಿಗೆ ಇಂದು ಬೆಳಗ್ಗೆ ಜಿಲ್ಲಾಧಿಕಾರಿ ರಂದೀಪ್ ಸೇರಿದಂತೆ ಇತರೆ ಅಧಿಕಾರಿಗಳು ಬೀಳ್ಕೋಟ್ಟರು. ಕಳೆದ ಒಂದೂರವರೆ ತಿಂಗಳಿನಿಂದ ಆನೆಗಳು ನಗರದಲ್ಲಿದ್ದು, ಜಂಬುಸವಾರಿಯನ್ನು ಮುಗಿಸಿ ರಿಲ್ಯಾಕ್ಸ್ ಮಾಡಿದ್ದ 16 ಆನೆಗಳನ್ನು ಲಾರಿ ಮೂಲಕ ತಮ್ಮ-ತಮ್ಮ ಕ್ಯಾಂಪ್‍ಗಳಿಗೆ ಜಿಲ್ಲಾಡಳಿತ ಕಳುಹಿಸಿಕೊಟ್ಟಿತ್ತು. ಅರ್ಜುನ ಬಳ್ಳೆ ಕ್ಯಾಂಪ್, ಮತ್ತಿಗೂಡಿಗೆ ಅಭಿಮನ್ಯು, ಗೋಪಾಲಸ್ವಾಮಿ, ಕೃಷ್ಣ, ಧ್ರೋಣ, ದುಬಾರೆ ಆನೆ ಶಿಬಿರಕ್ಕೆ ವಿಕ್ರಮ, ಗೋಪಿ, ಹರ್ಷ, ಪ್ರಶಾಂತ ಸೇರಿದಂತೆ ಇನ್ನಿತರ ಆನೆಗಳು ತಮ್ಮತಮ್ಮ ಕ್ಯಾಂಪ್‍ಗಳಿಗೆ ತೆರಳಿದವು. ಆನೆಗಳೊಂದಿಗೆ ಮಾವುತರು, ಕಾವಾಡಿಗರು ಹಾಗೂ ಅವರ ಕುಟುಂಬದವರನ್ನು ಸಹ ತೆರಳಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin