ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ : ಡಿವೈಎಸ್‍ಪಿ ಕೋದಂಡರಾಮು

ಈ ಸುದ್ದಿಯನ್ನು ಶೇರ್ ಮಾಡಿ

tipaturu

ತಿಪಟೂರು.ಆ.30 : ಸರ್ಕಾರಿ ಅಧಿಕಾರಿ ವರ್ಗದವರು ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದರೆ ಅದು ಅಪರಾಧ, ಸರ್ಕಾರ ನೀಡುವ ವೇತನ ಪಡೆದು ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸಿ, ಕಾನೂನಿನ ಕುಣಿಕೆಯಿಂದ ಯಾರಿಂದಲೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಸಿಬಿಯ ಡಿವೈಎಸ್‍ಪಿ ಕೋದಂಡರಾಮು ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಭ್ರಷ್ಟಾಚಾರ ನಿಗ್ರಹದಳ ಹಾಗೂ ಪೊಲೀಸ್ ಠಾಣೆಯ ವತಿಯಿಂದ ಆಯೋಜಿಸಿದ್ದ ಸಾರ್ವಜನಿಕರ ಅರಿವು ಮೂಡಿಸಿಸುವ ಸಲುವಾಗಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ತಾಲ್ಲೂಕಿನಿಂದ 4 ಅರ್ಜಿಗಳು ಸ್ವೀಕೃತವಾಗಿದ್ದು, ಮುಂದಿನ ದಿನಗಳಲ್ಲಿ ವಿಶೇಷ ತಜ್ಞರುಗಳನ್ನು ಎಸಿಬಿಗೆ ನೇಮಿಸಿಕೊಳ್ಳಲಿದ್ದು, ಎಲ್ಲಾ ಇಲಾಖೆಯ ಅಧಿಕಾರಿಗಳ ಮೇಲೆ ಹೆಚ್ಚಿನ ನಿಗಾವಹಿಸಲಾಗುವುದು.

ಸರ್ಕಾರಿ ನೌಕರರು ಸಾರ್ವಜನಿಕರ ಸೇವಕರಾಗಿದ್ದು ಉತ್ತಮವಾಘಿ ಕೆಲಸ ನಿರ್ವಹಿಸುವ ಅಧಿಕಾರಿಗಳಿಗೆ ಬೆಂಬಲವಾಗಿ ಎಸಿಬಿ ನಿಲ್ಲುತ್ತದೆ. ಸಾರ್ವಜನಿಕರು ಲಿಖಿತವಾಗಿ ದೂರು ದಾಖಲಿಸಲು 0816-2255522, 9480806267 ಈ ಸಂಖ್ಯೆಗಳಿಗೆ ಕರೆ ಮಾಡಿ ಅಥವಾ ನಮ್ಮ ಕಛೇರಿಯ ಅಂಚೆ ಮೂಲಕವೂ ದೂರು ದಾಖಲಿಸಬಹುದು ಎಂದು ತಿಳಿಸಿದರು.ದೂರು ದಾಖಲಿಸಿದ 4 ಅರ್ಜಿದಾರರಲ್ಲಿ ಡಿ.ಎಸ್.ಎಸ್.ಮುಖಂಡ ಶೆಟ್ಟಿಹಳ್ಳಿ ಕಲ್ಲೇಶ್ ಪತ್ರಿಕೆಯೊಂದಿಗೆ ಮಾತನಾಡಿ ತಾಲ್ಲೂಕಿನಾದ್ಯಂತ ಯಾವುದೇ ಗ್ರಾಮಗಳಲ್ಲಿಯೂ ಸಾರ್ವಜನಿಕ ಸ್ಮಶಾನವನ್ನು ಗುರುತಿಸಿದ್ದರೂ, ತೆರವಿನ ಕಾರ್ಯವಾಗಿಲ್ಲಿ.

ಊರಿನಲ್ಲಿ ಯಾರಾದರು ಮರಣ ಹೊಂದಿದರೆ ಶವ ಸಂಸ್ಕಾರ ಮಾಡುವುದು ದೊಡಡ ತೆನೋವಾಗಿ ಪರಿಣಮಿಸುತ್ತದೆ. ಹಲವಾರು ಭಾರಿ ಲೋಕಾಯುಕ್ತಕ್ಕೂ, ತಾಲ್ಲೂಕು ಆಡಳಿತದ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ತಿಳಿಸಿದರು. ಜೊತೆಗೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರುಗಳ ಕೊರತೆಯಿದ್ದು ಹೆಚ್ಚಿನ ಚಿಕಿತ್ಸೆಗಳಿಗಾಗಿ ಜಿಲ್ಲಾ ಕೇಂದ್ರಕ್ಕೆ ತೆರಳಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದಷ್ಟು ಶೀಘ್ರವಾಗಿ ವೈದ್ಯರುಗಳನ್ನು ನೇಮಿಸಲು ಕೋರಲಾಗಿದೆ ಎಂದು ತಿಳಿಸಿದಿರು.

ಹಿಂಡಿಸ್ಕೆರೆ ದೇವರಾಜು ದೂರು ದಾಖಲಿಸಿ ಮಾತನಾಡಿ ತಾಲ್ಲೂಕಿನಲ್ಲಿ ಉಪವಿಭಾಗಾಧಿಆಖರಿಗಳ ಗಮನಕ್ಕೆ ಬಾರದೇ ಅನೇಕ ಅಕ್ರಮ ಅನ್ಯಗಳು ನಡೆಯುತ್ತಿವೆ. ತಾಲ್ಲೂಕಿನ ಕಸಬಾ ಹೋಬಳಿಯ ಆರ್.ಐ. ನ್ನು ನೇಮಿಸುವಾಗ ಯಾವುದೋ ಒಬ್ಬ ಸಾಮಾನ್ಯ ಗ್ರಾಮ ಲೆಕ್ಕಿಗನನ್ನು ಆರ್.ಐ. ಆಗಿ ನೇಮಿಸಿದ್ದಾರೆ. ಈತ ಅನೇಕ ಅಕ್ರಮಗಳಲ್ಲಿಯೂ ಭಾಗಿಯಾಗಿರುವುದದಲ್ಲದೇ, ತನಗೆ ಇಚ್ಛೇಬಂದಂತೆ ಖಾತೆಗಳ ಬದಲಾವಣೆಯ ಪ್ರಕ್ರಿಯೆಯನ್ನು ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಒಬ್ಬ ಆರ್.ಐ.ನನ್ನು ಜಿಲ್ಲಾಧಿಕಾರಿ ನೇಮಿಸಬೇಕು ಆದರೆ ಇಲ್ಲಿ ತಹಶೀಲ್ದಾರ್ ನೇಮಿಸಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು ಎಂದು ದೂರು ದಾಖಲಿಸಿರುವುದಾಗಿ ತಿಳಿಸಿದರು.

ಇಂದಿರಾನಗರ ಲೇ ಔಟ್‍ನ ನಿವಾಸಿ ಕಮಲಮ್ಮ ಅಳುತ್ತಾಲೇ ಸಭೈಗೆ ಆಗಮಿಸಿ ನಗರಸಭೈಯಿಂದ ತಮ್ಮ ಪಿತ್ರಾರ್ಜಿತ ಆಸ್ತಿಯಲ್ಲಿ ಅಂಗನವಾಡಿ ನಿರ್ಮಿಸುವ ಮೂಲಕ ಒತ್ತುವರಿ ಮಾಡಿದ್ದು, ಜಾಗದ ತೆರವಿಗಾಗಿ ನಗರಸಭೈ ಮತ್ತು ತಾಲ್ಲೂಕು ಕಛೇರಿಗೆ ಸುತ್ತಿ ಸುತ್ತಿ ಸಾಕಾಗಿ ಹೋಗಿದೆ ಎಂದು ತಮ್ಮ ಅಳಲನ್ನು ತೊಡಿಕೊಂಡರು.
ಈ ಸಂದರ್ಭದಲ್ಲಿ ಪಿಎಸ್‍ಐ ಗುರುಪ್ರಸಾದ್, ಪ್ರಥಮದರ್ಜೆ ಸಹಾಯಕ ಮಲ್ಲಿಕಾರ್ಜುನ ಬಡೆನೂರು, ಉಪವಿಭಾಗಾಧಿಕಾರಿ ಪ್ರಜ್ಞಾ ಅಮ್ಮೇಂಬಳ ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin