ಕಾನೂನು ಅರಿವು ನೆರವಿಗೆ 20ರವರೆಗೆ ಕಾರ್ಯಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

arakalagudu-court

ಅರಕಲಗೂಡು, ಸೆ.17- ಕಾನೂನು ಸಾಕ್ಷರತಾ ರಥದೊಂದಿಗೆ ಜನ ಸಾಮಾನ್ಯರಿಗೆ ಕಾನೂನು ಅರಿವು ಮತ್ತು ನೆರವು ನೀಡುವ ಕಾರ್ಯಕ್ರಮವನ್ನು ಇಂದಿನಿಂದ 20ರವರೆಗೆ ಪಟ್ಟಣ ಸೇರಿದಂತೆ ವಿವಿಧೆಡೆ ಹಮ್ಮಿಕೊಳ್ಳಲಾಗಿದೆ ಎಂದು ಸಿವಿಲ್ ನ್ಯಾಯಾಧೀಶೆ ದಾಕ್ಷಾಯಿಣಿ ತಿಳಿಸಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಪ್ರತಿವರ್ಷ ಆರು ತಿಂಗಳಿಗೊಮ್ಮೆ ಎರಡು ಬಾರಿ ಕಾನೂನು ಸಾಕ್ಷರತಾ ರಥ ಮುಖೇನಾ ಕಾನೂನಿನ ಅರಿವು ಮೂಡಿಸಲಾಗುತ್ತಿದೆ ಎಂದರು.

ಸೆ.18ರಂದು ಕೊರಟಿಕೆರೆ ಗ್ರಾಮದಲ್ಲಿ ಬೆಳಗ್ಗೆ 10ಕ್ಕೆ ಮೊದಲ ಅಧಿವೇಶನ,ಮಧ್ಯಾಹ್ನ 12.30ಕ್ಕೆ ಎರಡನೇ ಅಧಿವೇಶನ ನಿಲುವಾಗಿಲು ಗ್ರಾಮದಲ್ಲಿ,ಮೂರನೇ ಅಧಿವೇಶನ ಮಧ್ಯಾಹ್ನ 3.30ಕ್ಕೆ ಅಗ್ರಹಾರ ಗ್ರಾಮದ ಸಮುದಾಯಭವನದಲ್ಲಿ ನಡೆಯಲಿದೆ. ಸೆ.19ರಂದು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೊದಲ ಅಧಿವೇಶನ ಬೆಳಗ್ಗೆ 10ಕ್ಕೆ. ಮಧ್ಯಾಹ್ನ 12.30ಕ್ಕೆ ಎರಡನೇ ಅಧಿವೇಶನ, ರಾಮನಾಥಪುರ ಪಟ್ಟಾಭಿರಾಮ ಪ್ರೌಢಶಾಲಾ ಆವರಣ. ಮೂರನೇ ಅಧಿವೇಶನ ತಾಲೂಕಿನ ರುದ್ರಪಟ್ಟಣದ ಪ್ರೌಢಶಾಲಾ ಆವರಣ. ಸೆ.20ರಂದು ಬೆಳಗ್ಗೆ 10ಕ್ಕೆ ಮೊದಲ ಅಧಿವೇಶನ ಬೈಚನಹಳ್ಳಿ ಕಾಲೇಜು ಆವರಣ.

ಎರಡನೇ ಅಧಿವೇಶನ ಗಂಜಲಗೂಡು ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಮಧ್ಯಾಹ್ನ 12-30ಕ್ಕೆ. ಮೂರನೇ ಅಧಿವೇಶನ ತಾಲೂಕಿನ ಹೆಬ್ಬಾಲೆ ಗ್ರಾಮದ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಮಧ್ಯಾಹ್ನ 3.30ಕ್ಕೆ ನಡೆಯಲಿದೆ.ಕಾನೂನು ಸಾಕ್ಷರತಾ ರಥ ಮುಖೇನಾ ಒಟ್ಟು ನಾಲ್ಕು ದಿನಗಳ ಕಾಲ ಪಟ್ಟಣ ಹಾಗೂ ತಾಲೂಕಿನ ಹಲವು ಗ್ರಾಮಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜನ ಸಾಮಾನ್ಯರು, ಮಹಿಳೆಯರು, ಮಕ್ಕಳು ಹಾಗೂ ಯುವಕರು ಭಾಗವಹಿಸಿ ಹಲವು ಉಪಯುಕ್ತ ಕಾನೂನಿನ ತಿಳುವಳಿಕೆ ಪಡೆದುಕೊಳ್ಳುವಂತೆ ಅವರು ತಿಳಿಸಿದರು.ಹಿರಿಯ ಸಿವಿಲ್ ನ್ಯಾಯಾಧೀಶ ಕೃಷ್ಣಪ್ರಸಾದ್ ರಾವ್,ವಕೀಲರ ಸಂಘದ ಅಧ್ಯಕ್ಷ ಹೇಮಂತ್‍ಕುಮಾರ್,ಕಾರ್ಯದರ್ಶಿ ಶಂಕರಯ್ಯ, ವಕೀಲರಾದ ರಾಜಶೇಖರ್,ರವಿ ಹಾಜರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin