ಕಾನೂನು ಉಲ್ಲಂಘಿಸಿದರೆ ನಿರ್ಧಾಕ್ಷಿಣ್ಯ ಕ್ರಮ
ದಾಬಸ್ಪೇಟೆ, ಮೇ 4- ಯಾವುದೇ ವ್ಯಕ್ತಿ ಕಾನೂನು ಬಾಹಿರ ಕೆಲಸ ಅಥವಾ ಸಮಾಜಘಾತುಕ ಕಾರ್ಯದಲ್ಲಿ ತೊಡಗಿದರೆ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆರಕ್ಷಕ ಉಪನಿರೀಕ್ಷಕ ನವೀನ್ಕುಮಾರ್ ಎಚ್ಚರಿಸಿದ್ದಾರೆ.ಸೋಂಪುರ ಹೋಬಳಿಯ ಶಿವಗಂಗೆ ಗ್ರಾಮದ ವಿಶ್ವಾರಾಧ್ಯ ಸಮುದಾಯ ಭವನದಲ್ಲಿ ನಡೆದಗ್ರಾಮ ಗಸ್ತು ಬೀಟಿನ ಸಭೆಯಲ್ಲಿ ಮಾತನಾಡಿದ ಅವರು, ಹೋಬಳಿಯಲ್ಲಿ ಶಿವಗಂಗೆ ಒಂದು ಪ್ರಮುಖಯಾತ್ರಾ ಸ್ಥಳಿಲ್ಲಿಗೆ ಪ್ರತಿದಿನ ಸಾವಿರಾರು ಮಂದಿ ಬೆಟ್ಟಕ್ಕೆಆಗಮಿಸುತ್ತಾರೆ. ಇಂಥಹ ಸ್ಥಳದಲ್ಲಿ ಸ್ಥಳೀಯರು ಸಮಾಜಘಾತುಕ ಚಟುವಟಿಕೆಗೆ ಅವಕಾಶ ನೀಡದೇ ಸಹಕಾರ ನೀಡಬೇಕು ಎಂದರು.
ಶಿವಗಂಗೆಯಲ್ಲಿ ಕೆಲ ದಿನಗಳಿಂದ ಕೊಲೆಗಳು ಹೆಚ್ಚಾಗುತ್ತಿವೆ, ಮುಜರಾಯಿ ಇಲಾಖೆಗೆ ಪತ್ರ ಬರೆದು ಸಿಸಿಟಿವಿಯನ್ನು ಅಳವಡಿಸುವುದು, ಕ್ಷೇತ್ರಕ್ಕೆ ಬರುವ ವಾಹನಗಳಿಗೆ ನಿಲುಗಡೆ ವ್ಯವಸ್ಥೆಕಡಿಮೆ ಇರುವುದರಿಂದ ಅದನ್ನು ಸ್ಥಳ ಪರಿಶೀಲಿಸಿ ವ್ಯವಸ್ಥೆ ಮಾಡುವುದು, ಹಾಗೆಯೇ ದೇವಸ್ಥಾನ ನೋಡವ ನೆಪದಲ್ಲಿ ಬರುವ ಪ್ರೇಮಿಗಳು ಬೆಟ್ಟದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ನಮಗೆ ಮಾಹಿತಿ ಬಂದಿದೆ ಅದನ್ನು ತಡೆಗಟ್ಟಲು ಹೆಚ್ಚಾಗಿ ಸಿಬ್ಬಂದಿಯನ್ನು ನೇಮಿಸಲಾಗುವುದು ಎಂದು ತಿಳಿಸಿದರು.ಶಿವಗಂಗೆ ಗ್ರಾಪಂ ಅಧಕ್ಷ ಹೊನ್ನಗಂಗಾಶೆಟ್ಟಿ, ತಮ್ಮಯ್ಯ, ಚಂದ್ರಕುಮಾರ್, ಮುಪ್ಪಿನಸ್ವಾಮಿ, ಸ್ವಾಮಿ, ಮಹೇಶ್, ರಮೇಶ್, ಪೇದೆಗಳಾದ ಈರಾಭೋವಿ, ಗಂಗೇಶ್ ಮತ್ತಿತರರು ಉಪಸ್ಥಿತರಿದ್ದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS