ಕಾನೂನು ಬದಲಾದರೆ ಮಾತ್ರ ಕ್ಷಿಪ್ರ ಪರಿವರ್ತನೆ ಸಾಧ್ಯ : ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

S-Modi

ನವದೆಹಲಿ,ಆ.26-ಭಾರತ ಕ್ಷಿಪ್ರಗತಿಯಲ್ಲಿ ಪರಿವರ್ತನೆ ಆಗಬೇಕಾದರೆ ಕಾನೂನುಗಳು ಬದಲಾಗಬೇಕು, ಪ್ರಕ್ರಿಯೆಗಳು ತ್ವರಿತಗೊಳ್ಳಬೇಕು ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.   ರಾಜಧಾನಿಯಲ್ಲಿ ಇಂದು ನೀತಿ ಆಯೋಗದಿಂದ ಆಯೋಜಿಸಲಾಗಿದ್ದ ‘ಪರಿವರ್ತನೆ ಭಾರತ’ ಕುರಿತ ಪ್ರಥಮ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.   ಭಾರತದ ಬಗ್ಗೆ ನಾನು ಹೊಂದಿರುವ ದೃಷ್ಟಿಕೋನದಲ್ಲಿ ಕ್ಷಿಪ್ರ ಪರಿವರ್ತನೆಯೂ ಒಂದು. ಇದು ನಿಧಾನಗತಿಯಲ್ಲಿ ಉಗಮವಾಗುವ ಬದಲು ತ್ವರಿತಗತಿಯಲ್ಲಿ ಅನುಷ್ಠಾನಕ್ಕೆ ಬರಬೇಕು ಎಂದು ಮೋದಿ ಹೇಳಿದರು.

ಭಾರತದ ಅಭಿವೃದ್ಧಿ ಸಂಸ್ಥೆಗಳು ಮತ್ತು ಆಲೋಚನೆಗಳ ಉತ್ತಮ ಗುಣಮಟ್ಟವನ್ನು ಅವಲಂಬಿಸಿದೆ. ಕೇವಲ ಪ್ರಗತಿಗೆ ಪ್ರೇರಣೆ ನೀಡುವ ಬದಲಾಗಿ ನಮ್ಮ ಕಾನೂನುಗಳಲ್ಲಿ ಬದಲಾವಣೆಯಾಗಬೇಕು,   ಅನಗತ್ಯ ವಿಧಾನಗಳನ್ನು ನಿವಾರಿಸಬೇಕು ಎಂದು ಪ್ರಧಾನಿ ತಿಳಿಸಿದರು.   ಪರಿವರ್ತನೆಯ ಸವಾಲುಗಳನ್ನು ಭಾರತ ಎದುರಿಸಬೇಕಾದರೆ ಕೇವಲ ಉತ್ತೇಜನದಾಯಕ ಪ್ರಗತಿಯೊಂದೇ ಸಾಲದು.  ಕ್ಷಿಪ್ರ ಪರಿವರ್ತನೆಯೂ ಆಗಬೇಕು ಎಂದು ಅವರು ಪ್ರತಿಪಾದಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin