ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತಂದರೆ ಕ್ರಿಮಿನಲ್ ಕೇಸ್ : ಮೆಘರಿಕ್ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Megharik
ಬೆಂಗಳೂರು, ಸೆ.14- ಮುಂದಿನ ಕೆಲವು ದಿನಗಳವರೆಗೂ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಇದನ್ನು ಮೀರಿ ಯಾರಾದರೂ ಗುಂಪಾಗಿ ರಸ್ತೆಗಿಳಿದು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತಂದರೆ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೆಘರಿಕ್ ಎಚ್ಚರಿಕೆ ನೀಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ಉದ್ರಿಕ್ತಗೊಂಡಿದ್ದ ಪ್ರದೇಶಗಳಲ್ಲಿ ಪರಿಸ್ಥಿತಿ ಈಗ ತಿಳಿಗೊಂಡಿದ್ದು, ಇಂದು ಬೆಳಗ್ಗೆ 9 ಗಂಟೆಯಿಂದ ಕರ್ಫ್ಯೂ ಸಡಿಲಿಸಲಾಗಿದೆ. ಆದರೆ, ನಿಷೇಧಾಜ್ಞೆ ಜಾರಿಯಲ್ಲಿದೆ ಎಂದರು. ಐದಕ್ಕಿಂತ ಮೇಲ್ಪಟ್ಟ ಜನ ಗುಂಪಾಗಿ ಸೇರುವುದನ್ನು ನಿಷೇಧಿಸಲಾಗಿದೆ. ರಸ್ತೆತಡೆ, ಪ್ರತಿಭಟನೆ, ಬಂದ್ ಮಾಡುವುವಂತಿಲ್ಲ. ಒಂದು ವೇಳೆ ನಿಯಮ ಮೀರಿ ಯಾರಾದರೂ ಈ ಚಟುವಟಿಕೆಗಳಲ್ಲಿ ಭಾಗಿಯಾದರೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಸಲಾಗುವುದು ಎಂದು ಹೇಳಿದರು. ಈವರೆಗೂ ಸುಮಾರು 350ಕ್ಕಿಂತಲೂ ಹೆಚ್ಚು ಮಂದಿಯನ್ನು ಬಂಸಲಾಗಿದ್ದು, ಘಟನೆ ಬಗ್ಗೆ ತನಿಖೆ ಮುಂದುವರೆದಿದೆ.

ಗಲಭೆ ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂಬುದು ಆಧಾರ ರಹಿತ. ದೃಶ್ಯಮಾಧ್ಯಮದಲ್ಲಿ ಉದ್ರಿಕ್ತ ಹಾಗೂ ಪ್ರಚೋದನಕಾರಿ ದೃಶ್ಯಗಳನ್ನು ತೋರಿಸಿದ್ದರಿಂದ ಗಲಭೆ ಏಕಾಏಕಿ ಹೆಚ್ಚಾಯಿತು. ಮೂರ‍್ನಾಲ್ಕು ಗಂಟೆಯಲ್ಲಿ ಅಹಿತಕರ ಘಟನೆಗಳು ಜರುಗಿದವು. ತಕ್ಷಣ ಪೊಲೀಸರು ಅಂತಹ ಸ್ಥಳಗಳಿಗೆ ಧಾವಿಸಿ ಎಲ್ಲವನ್ನೂ ತಹಬಂದಿಗೆ ತಂದಿದ್ದಾರೆ ಎಂದು ಹೇಳಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin