ಕಾನೂನು ಮೂಲಕ ಹೋರಾಡೋಣ: ನಟ ಗಣೇಶ್ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

Ganesh

ಬೆಂಗಳೂರು, ಸೆ.13– ಕಾವೇರಿ ತೀರ್ಪಿನಲ್ಲಿ ಕರ್ನಾಟಕಕ್ಕೆ ಹಿನ್ನೆಡೆ ಆಗಿರುವುದರ ಹಿನ್ನೆಲೆಯಲ್ಲಿ ಕನ್ನಡಿಗರು ಉದ್ರಿಕ್ತರಾಗಿರುವುದರಿಂದ ಈಗಾಗಲೇ ಉಮೇಶ್ ಎಂಬ ಯುವಕ ಬಲಿಯಾಗಿದ್ದಾನೆ ಆದ್ದರಿಂದ ನಗರ ಸೇರಿದಂತೆ ರಾಜ್ಯದೆಲ್ಲೆಡೆ ಶಾಂತಿ ಕಾಪಾಡಬೇಕೆಂದು ನಟ ಗೋಲ್ಡನ್‍ಸ್ಟಾರ್ ಗಣೇಶ್ ಅವರು ಮನವಿ ಮಾಡಿದ್ದಾರೆ.  ನಮಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದ ನಮ್ಮ ರಾಜ್ಯಕ್ಕೆ ಭಾರಿ ಹಿನ್ನೆಡೆ ಆಗಿದ್ದರೂ ಕೂಡ ಉದ್ರೇಕಕ್ಕೆ ಒಳಗಾಗದೆ ಕಾನೂನು ರೀತಿಯ ಹೋರಾಟದಿಂದಲೇ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳೋಣವೆಂದು ಸಲಹೆ ನೀಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin