ಕಾನ್ಪುರದಲ್ಲಿ ಶಸ್ತ್ರಸಜ್ಜಿತ ಡಕಾಯಿತರಿಂದ 3 ರೈಲುಗಳ ದರೋಡೆ

ಈ ಸುದ್ದಿಯನ್ನು ಶೇರ್ ಮಾಡಿ

3-Trains

ಕಾನ್ಪುರ, ಅ.5-ಮೂರು ರೈಲುಗಳ ಮೇಲೆ ಏಕಾಏಕಿ ದಾಳಿ ನಡೆಸಿದ ಶಸ್ತ್ರಸಜ್ಜಿತ ಡಕಾಯಿತರ ಗುಂಪೊಂದು ಪ್ರಯಾಣಿಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭಾರೀ ಪ್ರಮಾಣದ ನಗದು ಮತ್ತು ಚಿನ್ನಾಭರಣಗಳನ್ನು ಲೂಟಿ ಮಾಡಿ ಪರಾರಿಯಾಗಿರುವ ಘಟನೆ ಉತ್ತರಪ್ರದೇಶದಲ್ಲಿ ಇಂದು ಮುಂಜಾನೆ ನಡೆದಿದೆ. ಈ ಘಟನೆಯಲ್ಲಿ ಕೆಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಕಾನ್ಪುರ ರೈಲ್ವೆ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಮಾರ್ಗ ಸುಗಮಗೊಳ್ಳಲು ಸ್ವಲ್ಪ ದೂರದಲ್ಲಿ ನಿಂತಿದ್ದ ಮೂರು ರೈಲುಗಳಲ್ಲಿ ನಿದ್ರೆಯಲ್ಲಿದ್ದ ಪ್ರಯಾಣಿಕರ ಮೇಲೆ ಡಕಾಯಿತರು ಹಠಾತ್ ದಾಳಿ ಮಾಡಿದರು. ಪಿಸ್ತೂಲು, ಗನ್ ಮತ್ತು ಚಾಕುಗಳು ಹಿಡಿದಿದ್ದ ದುಷ್ಕರ್ಮಿಗಳು ಕೆಲವರ ಮೇಲೆ ಹಲ್ಲೆ ನಡೆಸಿ, ಪ್ರಾಣ ಬೆದರಿಕವೊಡ್ಡಿ ನಗದು, ಚಿನ್ನಾಭರಣಗಳು, ಮೊಬೈಲ್ ಹಾಗೂ ಪ್ರಯಾಣಿಕರ ಬ್ಯಾಗ್ಗಳನ್ನು ದೋಚಿ ಕತ್ತಲಲ್ಲಿ ಕಣ್ಮರೆಯಾದರು.

ವೈಶಾಲಿ ಎಕ್ಸ್ಪ್ರೆಸ್, ಲೋಕಮಾನ್ಯ ತಿಲಕ್ ಎಕ್ಸ್ಪ್ರೆಸ್ ಮತ್ತು ಸ್ಥಳೀಯ ರೈಲೊಂದರಲ್ಲಿ ಈ ಡಕಾಯಿತಿ ನಡೆದಿದೆ. ರೈಲುಗಳ ಬಾಗಿಲುಗಳನ್ನು ಭದ್ರಪಡಿಸಿದ್ದರೂ ಬೋಗಿಯೊಳಗೆ ಡಕಾಯಿತರು ಹೇಗೆ ನುಗ್ಗಿ ದುಷ್ಕøತ್ಯ ಎಸಗಿದರು ಎಂಬುದು ಸ್ಪಷ್ಟವಾಗಿಲ್ಲ.  ನಾನು ಮಲಗಿದ್ದೆ. ಶಬ್ಧ ಕೇಳಿ ಎಚ್ಚರಗೊಂಡಾಗ ನಾಲ್ವರು ವ್ಯಕ್ತಿಗಳು ಚಾಕು ಮತ್ತು ಗನ್ಗಳನ್ನು ಹಿಡಿದಿದ್ದರು. ಅವರು ನಮ್ಮ ಮೇಲೆ ಹಲ್ಲೆ ನಡೆಸಿ ನಗ-ನಾಣ್ಯ ಮತ್ತಿತ್ತರ ವಸ್ತುಗಳನ್ನು ದೋಚಿ ಪರಾರಿಯಾದರು ಎಂದು ಮಾರಕಾಸ್ತ್ರದಿಂದ ಹಲ್ಲೆಗೆ ಒಳಗಾಗಿ ತಲೆಗೆ ಬ್ಯಾಂಡೇಜ್ ಕಟ್ಟಲಾಗಿದ್ದ ಲಾಲಾ ಎಂಬ ಪ್ರಯಾಣಿಕ ರೈಲು ದರೋಡೆ ಘಟನೆಯನ್ನು ವಿವರಿಸಿದ್ದಾನೆ.

ಡಕಾಯಿತರು ಪ್ರಯಾಣಿಕರಿಂದ ದೋಚಿರುವ ಹಣ ಮತ್ತು ಚಿನ್ನಾಭರಣಗಳ ಮËಲ್ಯವನ್ನು ಅಂದಾಜು ಮಾಡಲಾಗುತ್ತಿದೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin