ಕಾನ್ಪುರ, ಆಂಧ್ರ ರೈಲು ದುರಂತದಲ್ಲಿ ಪಾಕ್’ನ ಐಎಸ್‍ಐ ಕೈವಾಡವಿರುವುದು ಸಾಬೀತು

ಈ ಸುದ್ದಿಯನ್ನು ಶೇರ್ ಮಾಡಿ

Kanpur-Train-Accident

ನವದೆಹಲಿ, ಜ.27-ಕಾನ್ಪುರ ಮತ್ತು ಆಂಧ್ರಪ್ರದೇಶದ ಕುನೇರು ಬಳಿ ಸಂಭವಿಸಿದ ರೈಲು ದುರಂತಗಳ ಘಟನೆ ಕುರಿತು ತನಿಖೆ ಮುಂದುವರಿಸಿರುವ ರಾಷ್ಟ್ರೀಯ ತನಿಖಾ ದಳಕ್ಕೆ(ಎನ್‍ಐಎ) ಇದು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‍ಐ ಕೈವಾಡವಿರುವುದು ದೃಢಪಟ್ಟಿದೆ. ಕೇಂದ್ರ ಗೃಹ ಸಚಿವಾಲಯದ ಆದೇಶದಂತೆ ಈ ಕುರಿತು ತನಿಖೆ ಮುಂದುವರಿಸಿರುವ ಎನ್‍ಐಎ ಅಧಿಕಾರಿಗಳು ಈವರೆಗೆ ಸಂಗ್ರಹಿಸಿ ಮಾಹಿತಿ ಮತ್ತು ವಿಚಾರಣೆಗಳಿಂದ ಐಎಸ್‍ಐ ಕೈವಾಡ ಶಂಕೆಗೆ ಪುರಾವೆ ಲಭಿಸಿದೆ.

ಐಎಸ್‍ಐ ಸ್ಥಳೀಯರನ್ನು ಬಳಸಿಕೊಂಡು ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದಕ್ಕೆ ಪೂರಕವಾದ ಮಾಹಿತಿಗಳು ಲಭಿಸಿವೆ. ಬಿಹಾರ ಪೊಲೀಸರು ಇತ್ತೀಚೆಗೆ ಬಂಧಿಸಿದ್ದ ಮೂವರು ವ್ಯಕ್ತಿಗಳು ನೀಡಿರುವ ಸುಳಿವನ್ನು ಆಧರಿಸಿ ಎಲ್ಲ ಆಯಾಮಗಳಿಂದಲೂ ತನಿಖೆ ತೀವ್ರಗೊಳಿಸಲಾಗಿದೆ.  ಕಾನ್ಪುರದಲ್ಲಿ ಕಳೆದ ವರ್ಷ ನವೆಂಬರ್‍ನಲ್ಲಿ ರೈಲು ಹಳಿ ತಪ್ಪಿ 150 ಮಂದಿ ಬಲಿಯಾಗಿದ್ದರು. ಆಂಧ್ರಪ್ರದೇಶದ ಕುನೇರು ಸಮೀಪ ಕಳೆದ ವಾರ ಜಗದಾಳ್‍ಪುರ-ಭುವನೇಶ್ವರ ಹಿರಾಖಂಡ್ ಎಕ್ಸ್‍ಪ್ರೆಸ್ ರೈಲು ಹಳಿ ತಪ್ಪಿದ ದುರಂತದಲ್ಲಿ 42 ಜನ ಸಾವಿಗೀಡಾಗಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin