ಕಾನ್ಸ್ಟೆಬಲ್ ಗೆ ಚೂರಿ ಇರಿದು ಸರಗಳ್ಳ ಪರಾರಿ

ಈ ಸುದ್ದಿಯನ್ನು ಶೇರ್ ಮಾಡಿ

Murder-01

ಬೆಂಗಳೂರು, ಅ.12- ಪರಾರಿಯಾಗುತ್ತಿದ್ದ ಸರಗಳ್ಳನ್ನು ಹಿಡಿಯಲು ಹೋದ ಕಾನ್‍ಸ್ಟೇಬಲ್ ಕುತ್ತಿಗೆಗೆ ಚಾಕುವಿನಿಂದ ಇರಿದು ತಪ್ಪಿಸಿಕೊಂಡಿರುವ ಘಟನೆ ಯಶವಂತಪುರ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಗಾಯಗೊಂಡಿರುವ ಯಶವಂತಪುರ ರೈಲ್ವೆ ಪೊಲೀಸ್ ಠಾಣೆ ಕಾನ್‍ಸ್ಟೇಬಲ್ ಅಲ್ಲಾವುದ್ದೀನ್ ಅವರು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ದರೋಡೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಸರಗಳ್ಳ ಮೊಹಮ್ಮದ್ ಅಲಿಗೆ ವಾರೆಂಟ್ ಜಾರಿಯಾಗಿತ್ತು. ಆದರೂ ಪೊಲೀಸರ ಕಣ್ತಪ್ಪಿಸಿ ತಲೆ ಮರೆಸಿಕೊಂಡಿದ್ದ.

ರಾತ್ರಿ ಅಲ್ಲಾವುದ್ದೀನ್ ಮತ್ತು ಇಬ್ಬರು ಕಾನ್‍ಸ್ಟೇಬಲ್‍ಗಳು ಗಸ್ತಿನಲ್ಲಿದ್ದಾಗ ಆರೋಪಿ ಮೊಹಮ್ಮದ್ ಅಲಿ ಈ ವ್ಯಾಪ್ತಿಯಲ್ಲಿರುವ ಬಗ್ಗೆ ಮಾಹಿತಿ ದೊರೆತಿದೆ.
ಈ ಸಂದರ್ಭದಲ್ಲಿ ಮೊಹಮ್ಮದ್ ಅಲಿ ಸರಗಳ್ಳತನ ನಡೆಸಿ ಪರಾರಿಯಾಗುತ್ತಿದ್ದಾಗ ಕಾನ್‍ಸ್ಟೇಬಲ್‍ಗಳು ಈತನನ್ನು ಹಿಡಿಯಲು ಮುಂದಾದಾಗ ಅಲ್ಲಾವುದ್ದೀನ್ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಈ ಸಂಬಂಧ ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin