ಕಾಫಿ ತೋಟಗಳಿಗೆ ನುಗ್ಗಿ ಕಾಡಾನೆಗಳ ಪುಂಡಾಟ, ರೈತರು ಕಂಗಾಲು

ಈ ಸುದ್ದಿಯನ್ನು ಶೇರ್ ಮಾಡಿ

Elephant---02

ಹಾಸನ, ಅ.1- ಜಿಲ್ಲೆಯ ಆಲೂರು ತಾಲ್ಲೂಕಿನ ಬೈದೂರು ಮತ್ತು ಕಾಡ್ಲೂರು ಬಳಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ನಿನ್ನೆ ರಾತ್ರಿ ಕಾಫಿ ತೋಟಗಳಿಗೆ ನುಗ್ಗಿ ಭಾರೀ ಪ್ರಮಾಣದ ಕಾಫಿ, ಏಲಕ್ಕಿ ಹಾಗೂ ಬಗಣಿ ಮರಗಳನ್ನು ನಾಶಪಡಿಸಿವೆ. ಕಳೆದ ಕೆಲವು ದಿನಗಳಿಂದ ಬೈದೂರು ಮತ್ತು ಕಾಡ್ಲೂರು ಸುತ್ತಮುತ್ತ ತಿರುಗಾಡಿಕೊಂಡು ದಾಂಧಲೆ ನಡೆಸುತ್ತಿರುವ ಸುಮಾರು 10 ಆನೆಗಳ ತಂಡ ಇಲ್ಲಿನ ರೈತರನ್ನು ನಿದ್ದೆಗೆಡಿಸಿದೆ.

ಕಾಡಾನೆಗಳನ್ನು ಓಡಿಸಿ ತಮ್ಮ ಬೆಳೆಗಳ ರಕ್ಷಣೆಗೆ ಅನುವು ಮಾಡಿಕೊಡದ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಈ ಗ್ರಾಮಗಳ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ನಮಗೆ ಕಾಡಾನೆಗಳನ್ನು ಹಿಡಿಯಲು ಅನುಮತಿ ಇಲ್ಲ. ಬರಿ ಓಡಿಸುವುದಕ್ಕೆ ಅನುಮತಿ ಇದೆ. ನಾವು ಓಡಿಸಿದರೂ ಅವು ಪುನಃ ಬರುತ್ತವೆ ಎಂದು ಅರಣ್ಯಾಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಈ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಆನೆ ಕಾರಿಡಾರ್ ಅಸ್ತಿತ್ವಕ್ಕೆ ಬಂದರೆ ರೈತರ ಸಂಕಷ್ಟ ತಪ್ಪಲಿದೆ. ಇದು ಇನ್ನೂ ಕೂಡ ನೆನೆಗುದಿಗೆ ಬಿದ್ದಿದ್ದು, ರೈತರು ಕಾಡಾನೆ ದಾಳಿಗಳನ್ನು ಎದುರಿಸುವುದು ಅನಿವಾರ್ಯವಾಗಿದೆ.

Facebook Comments

Sri Raghav

Admin