ಕಾಬುಲ್‍ನಲ್ಲಿರುವ ನ್ಯಾಟೋ ಕಚೇರಿ ಬಳಿ ಸಂಭವಿಸಿದ ಪ್ರಬಲ ಸ್ಪೋಟದಲ್ಲಿ 10 ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Kabul-NAto

ಕಾಬುಲ್, ಮೇ 3- ಆಫ್ಘನ್ ರಾಜಧಾನಿ ಕಾಬುಲ್‍ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಹಾಗೂ ನ್ಯಾಟೋ ಪ್ರಧಾನ ಕಚೇರಿ ಸಮೀಪ ಸಂಭವಿಸಿದ ಪ್ರಬಲ ಸ್ಫೋಟದಿಂದ 10 ಮಂದಿ ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ವಿದೇಶ ಬೆಂಗಾವಲು ಪಡೆಗಳನ್ನು ಗುರಿಯನ್ನಾಗಿಸಿಕೊಂಡು ಈ ಸ್ಫೋಟ ನಡೆಸಲಾಗಿದೆ ಎಂದು ಆಫ್ಘನ್ ವಿದೇಶಾಂಗ ವ್ಯವಹಾರಗಳ ವಕ್ತಾರ ನಜಿಬ್ ದನಿಷ್ ತಿಳಿಸಿದ್ದಾರೆ. ಸ್ಫೋಟದಿಂದ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದ ವಿದೇಶಿ ಪಡೆಗಳ ಎರಡು ವಾಹನಗಳು ಹಾನಿಗೊಂಡಿವೆ. ಜತೆಗೆ ರಸ್ತೆಯಲ್ಲಿ ಸಣ್ಣ ಕುಳಿ ಬಿದ್ದಿರುವುದನ್ನು ಎಎಫ್‍ಪಿ ಫೋಟೋಗ್ರಾಫರ್‍ಗಳು ಸಾಕ್ಷೀಕರಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin