ಕಾಬೂಲ್’ನಲ್ಲಿ ಅವಳಿ ಬಾಂಬ್ ಸ್ಫೋಟ ನಲ್ಲಿ : 25 ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

last-01

ಕಾಬೂಲ್, ಸೆ.6-ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ನಿನ್ನೆ ಸಂಭವಿಸಿದ ಎರಡು ಬಾಂಬ್ ಬಾಂಬ್ ದಾಳಿ ಮತ್ತು ಮೂರು ಸ್ಪೋಟಗಳಲ್ಲಿ ಕನಿಷ್ಠ 25 ಜನ ಹತರಾಗಿದ್ದು, 100ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡಿದ್ಧಾರೆ.   ಕಾಬೂಲ್ನ ರಕ್ಷಣಾ ಸಚಿವಾಲಯದ ಬಳಿ ನಿನ್ನೆ ಸಂಜೆ ನಡೆದ ತಾಲಿಬಾಲ್ ಆತ್ಮಾಹತ್ಯಾ ದಾಳಿಯಲ್ಲಿ ಹಿರಿಯ ಸೇನಾಧಿಕಾರಿಗಳೂ ಸೇರಿದಂತೆ 24 ಮಂದಿ ಹತರಾಗಿ ಅನೇಕರು ಗಾಯಗೊಂಡಿದ್ದರು. ಅದಾದ ಕೆಲವು ಗಂಟೆಗಳ ಬಳಿಕ ಕೇಂದ್ರ ಭಾಗದಲ್ಲಿ ಕಾರ್ಬಾಂಬ್ ಸ್ಫೋಟಗೊಂಡಿತು. ಇದೇ ವೇಳೆ ಉಗ್ರಗಾಮಿಗಳು ಕಟ್ಟಡಗೊಳಗೆ ನುಸುಳಿದ್ದು ಅವರನ್ನು ಹೊರಹಾಕಲು ಸೇನಾಪಡೆಗಳು ಕಾರ್ಯಾಡಚರಣೆಗೆ ಇಳಿದಾಗ ಗುಂಡಿನ ಚಕಮಕಿ ನಡೆಯಿತು. ಇಡೀ ರಾತ್ರಿ ನಡೆದ ಎನ್ಕೌಂಟರ್ನಲ್ಲಿ ಓರ್ವ ನಾಗರಿಕ ಮೃತಪಟ್ಟು, ಇತರ ಆರು ಮಂದಿ ಗಾಯಗೊಂಡಿದ್ಧಾರೆ.

ಅಲ್ಕೈದಾ ಬೆಂಬಲಿತ ತಾಲಿಬಾನ್ ಉಗ್ರರು ಮತ್ತೆ ಕಾಬೂಲ್ ಮೇಲೆ ದಾಳಿಗಳನ್ನು ತೀವ್ರಗೊಳಿಸಿರುವುದರಿಂದ ನಾಗರಿಕರು ಆತಂಕಗೊಂಡಿದ್ದಾಳೆ.

► Follow us on –  Facebook / Twitter  / Google+

Facebook Comments

Sri Raghav

Admin