ಕಾಮಗಾರಿ ಪರಿಶೀಲಿಸಲು ಶಾಸಕರ ಕರೆ
ಕೆ.ಆರ್.ನಗರ, ಸೆ.8- ಸರ್ಕಾರದ ಅನುದಾನದಿಂದ ನಿರ್ವಹಣೆ ಮಾಡುವ ಕಾಮಗಾರಿಗಳನ್ನು ಸಾರ್ವಜನಿಕರು ಮತ್ತು ಸ್ಥಳೀಯ ಚುನಾಯಿತ ಸದಸ್ಯರು ಪರಿಶೀಲಿಸಿ ಗುಣಮಟ್ಟದ ಕಾಮಗಾರಿಯನ್ನು ಮಾಡಿಸಿಕೊಳ್ಳಬೇಕು ಎಂದು ಶಾಸಕ ಸಾ.ರಾ.ಮಹೇಶ್ ಕರೆ ನೀಡಿದರು. ತಾಲೂಕಿನ ಕುಂಬಾರ ಕೊಪ್ಪಲು ಗ್ರಾಮದಲ್ಲಿ ಗ್ರಾಮ ಪರಿಮಿತಿ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಳೆದ 40 ವರ್ಷಗಳಿಂದ ಅಭಿವೃದ್ದಿ ಕಾಣದ ಗ್ರಾಮದ ಮುಖ್ಯ ರಸ್ತೆಯ ಡಾಂಬರೀಕರಣ ಮಾಡಲು ನಬಾರ್ಡ್ ವತಿಯಿಂದ 50 ಲಕ್ಷ ರೂ ಬಿಡುಗಡೆ ಮಾಡಿಸಲಾಗಿದೆ ಎಂದು ತಿಳಿಸಿದರು.
ಕಾಮಗಾರಿ ಯಾವುದೇ ಕಾರಣಕ್ಕೂ ಕಳಪೆಯಾಗದಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರ ಜತೆಗೆ ಸಾರ್ವಜನಿಕರು ಎಚ್ಚರ ವಹಿಸಬೇಕೆಂದರು.ಜಿಪಂ ಸದಸ್ಯ ಅಚ್ಚುತಾನಂದ, ತಾಪಂ ಸದಸ್ಯ ಬಿ.ಟಿ.ಮಹದೇವ್, ಮಾಜಿ ಸದಸ್ಯ ಎಂ.ತಮ್ಮಣ್ಣ, ಗ್ರಾಪಂ ಅಧ್ಯಕ್ಷೆ ಮಮತಜಗದೀಶ್, ಉಪಾಧ್ಯಕ್ಷೆ ರಾಧಾರಾಮಚಂದ್ರ, ಸದಸ್ಯರಾದ ಬಸವರಾಜನಾಯಕ, ಕೃಷ್ಣಾನಂದ, ಸಣ್ಣಮ್ಮ, ಟೋಪಿಮಹದೇವ್, ಶಾರದ ಶಿವರಾಮು, ವೀಣಾಜಯರಾಮು, ಜಿಪಂ ಎಇಇ ರಮೇಶ್, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಯೋಜನಾಧಿಕಾರಿ ಬಿ.ಅಶೋಕ್, ಇಂಜಿನಿಯರ್ ಶಿವಪ್ರಸಾದ್, ಪಿಡಿಒ ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.
► Follow us on – Facebook / Twitter / Google+