ಕಾಮಗಾರಿ ಶೀಘ್ರ ಮುಗಿಸಲು ಅಧಿಕಾರಿಗಳಿಗೆ ತಾಕೀತು

ಈ ಸುದ್ದಿಯನ್ನು ಶೇರ್ ಮಾಡಿ

nanjanagudu

ನಂಜನಗೂಡು, ಸೆ.16- ತಾಲೂಕಿನ ಹುಲ್ಲಹಳ್ಳಿ ಹೋಬಳಿಯಲ್ಲಿ ನಿರ್ಮಿಸುತ್ತಿರುವ ಶುದ್ದ ಕುಡಿಯುವ ನೀರಿನ ಘಟಕ ಕಾಮಗಾರಿಯನ್ನು ಸಂಸದ ಆರ್.ಧೃವನಾರಾಯಣ್ ಭೇಟಿ ನೀಡಿ ಪರಿಶೀಲಿಸಿ ಶೀಘ್ರ ಕೆಲಸ ಮುಗಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.ಸಂಸದರು ಕಪಿಲಾ ನದಿಯಲ್ಲಿ ನಡೆಯುತ್ತಿರುವ ಜಾಗ್‍ವೆಲ್‍ನ್ನು ಪರಿಶೀಲಿಸಿ ನಂತರ ನೀರಿನ ಶುದ್ದೀಕರಣ ಘಟಕಕ್ಕೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಮತ್ತು ಪೈಪ್‍ಗಳ ಗುಣಮಟ್ಟವನ್ನು ಪರಿಶೀಲಿಸಿದರದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ರಾಜ್ಯ ಸರ್ಕಾರದಿಂದ ಶೇ 75, ಕೇಂದ್ರ ಸರ್ಕಾರದಿಂದ ಶೇ 25 ರಷ್ಟು ಅನುದಾನದೊಂದಿಗೆ ಮಲ್ಟಿವಿಲೇಜ್ ಯೋಜನೆಯಡಿಯಲ್ಲಿ 124 ಹಳ್ಳಿಗಳಿಗೆ ಶುದ್ದ ಕುಡಿಯುವ ನೀರನ್ನು ಪೂರೈಸುವ ಕಾಮಗಾರಿಯು ನಡೆಯುತ್ತಿದ್ದು, ಈ ಯೋಜನೆ ಈಗಾಗಲೇ ಅನುಷ್ಠಾನಕ್ಕೆ ಬಂದು ನೀರನ್ನು ಗ್ರಾಮಗಳಿಗೆ ಹರಿಸಬೇಕಾಗಿತ್ತು. ಆದರೆ, ಕೆಲವು ಕಾರಣಗಳಿಂದ ಕಾಮಗಾರಿಗಳು ವಿಳಂಭವಾಗಿದ್ದು, ಇನ್ನು ಹತ್ತು ತಿಂಗಳೊಳಗೆ ಶುದ್ದ ಕುಡಿಯುವ ನೀರು 124 ಗ್ರಾಮಗಳಿಗೆ ಸಿಗಲಿದೆ ಎಂದರು.
ಇಇ ಮಂಜುನಾಥ್ ಮಾತನಾಡಿ, ದೇಪೇಗೌಡನಪುರದಲ್ಲಿ ನೀರಿನ ಟ್ಯಾಂಕ್‍ಗಳನ್ನು ನಿರ್ಮಿಸಿದ್ದು, 288 ಕಿಮೀ ಉತ್ತಮ ಗುಣಮಟ್ಟದ ಪೈಪ್‍ಲೈನ್‍ಗಳನ್ನು ಅಳವಡಿಸಬೇಕಾಗಿದ್ದು, ಈಗಾಗಲೇ ಶೇ.30ರಷ್ಟು ಪೈಪ್‍ಲೈನ್‍ಗಳನ್ನು ಅಳವಡಿಸಲಾಗಿದ್ದು, ಗುಣಮಟ್ಟ ಕಾಪಾಡಿಕೊಂಡು ಶೀಘ್ರ ಕಾಮಗಾರಿಯನ್ನು ಮುಗಿಸಿಕೊಡುವುದಾಗಿ ಭರವಸೆ ನೀಡಿದರು.ಎಇಇ ರಮೇಶ್, ಸಿ.ಎಂ.ರಾಜೀವ್, ತಾಪಂ ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಶೀವಣ್ಣ, ತಾಪಂ ಮಾಜಿ ಅಧ್ಯಕ್ಷ ನಾಗೇಶ್‍ರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ, ಕೆಪಿಸಿಸಿ ಅಧ್ಯಕ್ಷ ಬಸವರಾಜು, ಲಕ್ಷ್ಮಿನಾಗರಾಜು, ಆಶ್ರಯ ಸಮಿತಿ ಸದಸ್ಯ ಬಸವರಾಜು, ಶಿವರುದ್ರ ಮಲ್ಲಿಕಾರ್ಜುನ್, ರಜಾಕ್, ಶೈಲಾಬಾಲರಾಜ್ ಮತ್ತಿತರರು ಪಾಲ್ಗೊಂಡಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin