ಕಾಮಿಡಿ ನೈಟ್ ಬಚಾವೋ ಕಾರ್ಯಕ್ರಮದಲ್ಲಿ ತನಿಷ್ಕಾ ಚಟರ್ಜಿ ಅವಮಾನ , ಕ್ಷಮೆ ಕೇಳಿದ ಕಲರ್ಸ್ ಟಿವಿ

ಈ ಸುದ್ದಿಯನ್ನು ಶೇರ್ ಮಾಡಿ

17

ಕಂದು ಮೈಬಣ್ಣದ ಕಾರಣಕ್ಕಾಗಿ ಕಾಮಿಡಿ ನೈಟ್ ಬಚಾವೋ ಕಾರ್ಯಕ್ರಮದಲ್ಲಿ ಅಪಮಾನಕ್ಕೆ ಒಳಗಾದ ನಟಿ ತನಿಷ್ಕಾ ಚಟರ್ಜಿ ಅರ್ಧದಲ್ಲೇ ಎದ್ದು ಹೋದ ಪ್ರಸಂಗ ಮತ್ತು ಆನಂತರ ಅವರಲ್ಲಿ ಈ ಕಾರ್ಯಕ್ರಮ ಪ್ರಸಾರ ಮಾಡುವ ಕಲರ್ಸ್ ಟಿವಿ ಕ್ಷಮೆ ಯಾಚಿಸಿದ ಪ್ರಹಸನವಿದು. ತನಿಷ್ಕಾ ಚಟರ್ಜಿ ತಾವು ನಟಿಸಿರುವ ಪಚ್ರ್ಡ್ ಸಿನಿಮಾಗೆ ಪ್ರಚಾರ ನೀಡುವ ಸಲುವಾಗಿ ಮುಂಬೈನಲ್ಲಿ ಕಾಮಿಡಿ ನೈಟ್ ಬಚಾವೋ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಆದರೆ ತನಿಷ್ಕಾ ಕಾರ್ಯಕ್ರಮದ ಮಧ್ಯದಲ್ಲೇ ಹೊರ ಬಂದಿದ್ದರು.
ನಂತರ ಫೇಸ್‍ಬುಕ್‍ನಲ್ಲಿ ಒಂದು ಬರಹ ಬರೆದಿದ್ದ ಅವರು ನನ್ನ ಕಂದು ಮೈ ಬಣ್ಣದ ಕಾರಣಕ್ಕಾಗಿ ನನ್ನನ್ನು ಅಪಮಾನಿಸಲಾಯಿತು. ಹೀಗಾಗಿ ಕಾರ್ಯಕ್ರಮದಿಂದ ಮಧ್ಯದಲ್ಲೇ ಎದ್ದು ಬಂದೆ ಎಂದು ಸ್ಪಷ್ಟೀಕರಣ ನೀಡಿದ್ದರು. ಇದಕ್ಕೆ ಫೇಸ್‍ಬುಕ್‍ನಲ್ಲಿ ಪ್ರತಿಕ್ರಿಯೆ ನೀಡಿದ ಕಲರ್ಸ್ ವಾಹಿನಿ ವಕ್ತಾರರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕಾರ್ಯಕ್ರಮ ಪ್ರಸಾರ ಮಾಡುವಾಗ ಅದರಲ್ಲಿ ಇಂಥ ಆಕ್ಷೇಪಾರ್ಹ ಅಂಶಗಳು ಇಲ್ಲದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿ ಈ ಪ್ರಹಸನಕ್ಕೆ ತಿಪ್ಪೆ ಸಾರಿಸುವ ಪ್ರಯತ್ನ ಮಾಡಿದರು. ಮೈಬಣ್ಣಕ್ಕೂ ಪ್ರತಿಭೆಗೂ ಏನು ಸಂಬಂಧ ? ಮೋಹಕ ಮೈಮಾಟ ಹೊಂದಿರುವ ಕಂದು ಬಣ್ಣದ ಚೆಲುವೆ ತನಿಷ್ಕಾ ಪ್ರತಿಭಾವಂತ ನಟಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇದನ್ನು ಅರ್ಥ ಮಾಡಿಕೊಳ್ಳದೇ ಆಕೆಯನ್ನು ಅಪಮಾನಿಸಿದ ಘಟನೆಗೆ ಏನೆನ್ನಬೇಕೋ ತಿಳಿಯದು.
► Follow us on –  Facebook / Twitter  / Google+

Facebook Comments

Sri Raghav

Admin