ಕಾಮುಕ ಆಟೋ ಚಾಲಕರ ಬಂಧನಕ್ಕೆ ಸಹಕರಿಸಿದ ಮತ್ತೊಬ್ಬ ಆಟೋ ಚಾಲಕನಿಗೆ ಬಹುಮಾನ

ಈ ಸುದ್ದಿಯನ್ನು ಶೇರ್ ಮಾಡಿ

Auto-Driver--01

ಬೆಂಗಳೂರು, ಆ.11-ಬಲವಂತವಾಗಿ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಆಟೋ ಚಾಲಕರಿಬ್ಬರಿಂದ ಯುವತಿಯೊಬ್ಬಳನ್ನು ಮತ್ತೊಬ್ಬ ಆಟೋ ಚಾಲಕನೇ ರಕ್ಷಣೆಗೆ ಸಹಕರಿಸಿ ಮಾನವೀಯತೆ ಮತ್ತು ಸಾಹಸ ಮೆರೆದಿದ್ದಾನೆ. ನಿನ್ನೆ ರಾತ್ರಿ ಯಶವಂತಪುರದಲ್ಲಿ ಅಪಹರಣಕ್ಕೊಳಗಾದ ಯುವತಿಯ ರಕ್ಷಣೆಗೆ ಮುಂದಾದ ಅಸ್ಗರ್ ಪಾಷ ಅವರು ತಾವು ಮಾಡಿದ ಕೆಲಸದ ಬಗ್ಗೆ ಮಾಧ್ಯಮಗಳಿಗೆ ವಿವರಗಳನ್ನು ನೀಡಿದರು.
aaaaa

 

ತನ್ನ ಸೋದರನೊಂದಿಗೆ ಬಂದಿದ್ದ ಯುವತಿಯನ್ನು ಇಬ್ಬರು ಬಲವಂತವಾಗಿ ಎಳೆದೊಯ್ದರು. ಸೋದರನನ್ನು ಹೊಡೆದು ಆಕೆಯನ್ನು ಕರೆದೊಯ್ಯುತ್ತಿದ್ದುದು ನನ್ನ ಆಟೋ ಮಿರರ್‍ನಲ್ಲಿ ಕಾಣುತ್ತಿತ್ತು. ಏನೋ ನಡೆಯುತ್ತಿದೆ ಎಂಬುದು ನನ್ನ ಅರಿವಿಗೆ ಬಂತು. ಕೂಡಲೇ ನನ್ನ ಸ್ನೇಹಿತರಿಗೆ ಫೋ ನ್ ಮಾಡಿ ಕರೆಸಿಕೊಂಡು ಯಾರೋ ಕಿಡಿಗೇಡಿಗಳು ಯುವತಿಯನ್ನು ಅಪಹರಣ ಮಾಡಿದರು ಎಂದು ಮಾತನಾಡಿಕೊಂಡೆವು. ಕೂಡಲೇ ಪೊಲೀಸರಿಗೆ ತಿಳಿಸಿದೆವು.

ಅಲರ್ಟ್ ಆದ ಪೊಲೀಸರು ಹುಡಕಲು ಪ್ರಾರಂಭಿಸಿದರು. ಅಲ್ಲೇ 200 ಮೀಟರ್ ದೂರದಲ್ಲಿದ್ದ ಗೋಡೋನ್‍ನಲ್ಲಿ ಒಬ್ಬ ಸಿಕ್ಕಿದ. ಆತನನ್ನು ಹಿಡಿದು ವಿಚಾರಿಸಿದಾಗ ಆ ಯುವತಿಯನ್ನು ಗೋಡೋನ್‍ನಲ್ಲಿ ಕಟ್ಟಿಹಾಕಿದ್ದು ಗೊತ್ತಾಯಿತು. ಕೂಡಲೇ ಪೊಲೀಸರು ಆ ಯುವತಿಯನ್ನು ರಕ್ಷಿಸಿದರು. ಆಗ ನಮಗೆ ಸಮಾಧಾನವಾಯಿತು. ಯುವತಿಯನ್ನು ರಕ್ಷಿಸಿದ್ದಕ್ಕೆ ನಮಗೆಲ್ಲ ಆನಂದವಾಯಿತು. ಪಾಪ ಅವರು ಎಲ್ಲಿ ಹೋಗಬೇಕಿತ್ತೊ ಏನೋ. ಬಹಳ ಆತಂಕದಲ್ಲಿದ್ದರು. ನಾವು ಒಬ್ಬರನ್ನು ರಕ್ಷಿಸಿದರೆ ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಮತ್ತೊಬ್ಬರು ರಕ್ಷಿಸುತ್ತಾರೆ ಎಂದು ಮಾಧ್ಯಮದವರಿಗೆ ಅಸ್ಗರ್ ಪಾಷ ಹೇಳಿದರು.
ಆಟೋ ಚಾಲಕರಾಗಲಿ, ಯಾರಾಗಲಿ ತಪ್ಪು ತಪ್ಪೆ. ನಮ್ಮ ಕಣ್ಣೆದುರಿಗೆ ತಪ್ಪು ನಡೆದಿರುವುದು ಗೊತ್ತಾಯಿತು. ಅದಕ್ಕೆ ಪೊಲೀಸರಿಗೆ ತಿಳಿಸಿ ಸಹಕರಿಸಿದೆವು. ಒಂದು ದೊಡ್ಡ ಅನಾಹುತ ತಪ್ಪಿತು ಎಂದು ಅವರು ಹೇಳಿದರು.

 

Facebook Comments

Sri Raghav

Admin