ಕಾಯಕವನ್ನೇ ಉಸಿರಾಗಿಟ್ಟುಕೊಂಡವರು ಡಾ.ರಾಜೇಂದ್ರ ಶ್ರೀಗಳು

ಈ ಸುದ್ದಿಯನ್ನು ಶೇರ್ ಮಾಡಿ

dr.rajendraswamiji

ನಂಜನಗೂಡು, ಆ.19- ಆಧುನಿಕ ಉನ್ನತ ಶಿಕ್ಷಣವನ್ನು ಪ್ರಜೆಗಳಿಗೆ ನೀಡುವುದರ ಮೂಲಕ ಬ್ರಿಟಿಷರು ಕೊಟ್ಟ ಸ್ವಾತಂತ್ರ್ಯವನ್ನು ದಕ್ಕಿಸಿಕೊಳ್ಳುವ ಎದೆಗಾರಿಕೆಯನ್ನು ಭಾರತೀಯರಲ್ಲಿ ಬೆಳೆಸಿದವರು ಡಾ.ಶಿವರಾತ್ರಿ ರಾಜೇಂದ್ರ ಶ್ರೀಗಳು ಎಂದು ಶಿವಮೊಗ್ಗ ಬಸವ ಕೇಂದ್ರದ ಶ್ರೀ ಬಸವ ಮರುಳ ಸಿದ್ದಸ್ವಾಮಿಗಳು ತಿಳಿಸಿದರು.ತಾಲ್ಲೂಕಿನ ದೇವಿರಮ್ಮನಹಳ್ಳಿ ರಸ್ತೆಯಲ್ಲಿರುವ ಜೆಎಸ್‍ಎಸ್ ಪದವಿ ಮತ್ತು ಪದವಿಪೂರ್ವ ಕಾಲೇಜುನ ಆವರಣದಲ್ಲಿ ಏರ್ಪಡಿಸಿದ್ದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೆ.ಆರ್.ಮೋಹನ್ ಕುಮಾರ್ ಮಾತನಾಡಿ, ಡಾ.ರಾಜೇಂದ್ರ ಶ್ರೀಗಳ ಬದುಕೇ ನಮಗೆ ಒಂದು ಸಂದೇಶವಾಗಿದೆ. ಅಲ್ಲದೆ ಕಾಯಕ ಮತ್ತು ದಾಸೋಹವನ್ನು ತಮ್ಮ ಉಸಿರಾಗಿಟ್ಟುಕೊಂಡವರು ಡಾ.ರಾಜೇಂದ್ರ ಶ್ರೀಗಳು ಎಂದರು.
ಅಖಿಲ ಭಾರತ ಸರಣ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಗೊ.ರು.ಪರಮೇಶ್ವರಪ್ಪ ಮಾತನಾಡಿ, ಶ್ರೀಗಳು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಸಹಾಯ ಹಸ್ತವನ್ನು ಚಾಚುವುದರ ಮೂಲಕ ಜಾತ್ಯಾತೀತ, ಧರ್ಮಾತೀತ ಸಂಸ್ಥೆಯನ್ನು ಕಟ್ಟಿದ ಮಹಾನೀಯರೆನಿಸಿದ್ದಾರೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಲಾಯಿತು. ಪ್ರಾಂಶುಪಾಲರಾದ ಎಂ.ಪಿ.ವಿಜಯೇಂದ್ರಕುಮಾರ್, ಸಿ.ವಿ.ಬಸವರಾಜು, ಮಾಡಾ ಸದಸ್ಯೆ ಅನಸೂಯ ಗಣೇಶ್, ಆರ್.ವಿ.ಮಹದೇವಸ್ವಾಮಿ, ಕಾಲೇಜಿನ ಅಧ್ಯಾಪಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin