ಕಾರವಾರ : ಅಪಾಯಕ್ಕೆ ಸಿಲುಕಿದ್ದ 30 ಮೀನುಗಾರರ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Karwar-01

ಕಾರವಾರ, ಅ.13- ಬೊಟ್ ಗೆ ನೀರು ನುಗ್ಗಿ ಅಪಾಯಕ್ಕೆ ಸಿಲುಕಿದ್ದ 30 ಮೀನುಗಾರರನ್ನು ಕರಾವಳಿ ಕಾವಲು ಪಡೆ ಪೊಲೀಸರು ರಕ್ಷಣೆ ಮಾಡಿದ್ದಾರೆ. ಕಾರವಾರ ಬಂದರಿನಿಂದ 13 ನಾಟಿಕಲ್ ಮೈಲುದೂರದ ಸಮುದ್ರದಲ್ಲಿ ಗೋಪಿಚಂದ್ ಎಂಬುವರಿಗೆ ಸೇರಿದ್ದ ರಾಜೇಶ್ವರಿ ಕೃಪಾ ಎಂಬ ಬೋಟ್ ಅಪಾಯಕ್ಕೆ ಸಿಲುಕಿದ್ದು, ಈ ಬೋಟ್ನಲ್ಲಿ 30 ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು.
ಬೋಟ್ಗೆ ನೀರು ನುಗ್ಗಲು ಪ್ರಾರಂಭವಾಗುತ್ತಿದ್ದಂತೆ ಕಾವಲುಪಡೆ ಪೊಲೀಸರಿಗೆ ಮಾಹಿತಿ ನೀಡಲಾಗಿ ನಂತರ ಕಾವಲು ಪಡೆ ಅವರನ್ನು ರಕ್ಷಿಸಿದೆ. ಕಾವಲು ಪಡೆಯ ಸ್ಪೀಡ್ಬೋಟ್ ಸಹಾಯದಿಂದ ಬೋಟ್ಅನ್ನು ಮೀನುಗಾರರ ಸಮೇತ ದಡಕ್ಕೆ ತಂದು ರಕ್ಷಣೆ ಮಾಡಲಾಯಿತು. ಕರಾವಳಿ ಕಾವಲು ಪಡೆ ಇನ್ಸ್ಪೆಕ್ಟರ್ ಎನ್.ಎಂ.ರಾಣೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin