ಕಾರವಾರ : ಆಸ್ತಿ ವಿಚಾರಕ್ಕೆ ಡಬಲ್ ಮರ್ಡರ್, ನಾಲ್ವರು ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Murder--01

ಕಾರವಾರ, ಫೆ.15- ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ನಡುವೆ ನಡೆದ ಜಗಳದಲ್ಲಿ ಇಬ್ಬರನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿರುವ ಘಟನೆ ಸಿದ್ದಾಪುರ ತಾಲೂಕಿನ ಕನಗೋಡು ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ. ರೇಣುಕಾ ಕನ್ನ ನಾಯ್ಕ (48), ರವಿ ನಾಯ್ಕ (29) ಕೊಲೆಯಾದವರು.  ಆಸ್ತಿ ವಿಚಾರವಾಗಿ ಇಂದು ಬೆಳಗ್ಗೆ ಎರಡು ಕುಟುಂಬಗಳ ನಡುವೆ ಭಾರೀ ಜಗಳ ನಡೆದಿದ್ದು, ವಿಕೋಪಕ್ಕೆ ತಿರುಗಿ ರೊಚ್ಚಿಗೆದ್ದ ಪೃಥ್ವಿ, ಪವನ್, ಪ್ರಸಾದ್ ಎಂಬುವವರು ರೇಣುಕಾ ಕನ್ನ ನಾಯ್ಕ ಹಾಗೂ ರವಿ ನಾಯ್ಕ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.

ಈ ವೇಳೆ ಕನ್ನನಾಯ್ಕ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹತ್ಯೆ ಆರೋಪಿಗಳಾ ದ ಪೃಥ್ವಿ, ಪವನ್, ಪ್ರಸಾದ್ ಮತ್ತು ಗಣಪತಿ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆಸ್ತಿ ವಿಚಾರವೇ ಈ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಿದ್ದಾರೆ.

Facebook Comments

Sri Raghav

Admin