ಕಾರವಾರ : ಟ್ಯಾಗೂರ್ ಬೀಚ್ ನಲ್ಲಿ ಅಕ್ರಮ ಗುಡಿಸಲುಗಳ ತೆರವು

ಈ ಸುದ್ದಿಯನ್ನು ಶೇರ್ ಮಾಡಿ

Beach

ಕಾರವಾರ, ಆ.21-ಇಲ್ಲಿನ ರವೀಂದ್ರನಾಥ ಟ್ಯಾಗೂರ್ ಬೀಚ್ನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮೀನುಗಾರರ ಗುಡಿಸಲುಗಳನ್ನು ಇಂದು ಬೆಳ್ಳಂಬೆಳಗ್ಗೆ ತೆರವುಗೊಳಿಸಲಾಯಿತು. ಗುಡಿಸಲುಗಳನ್ನು ನೆಲಸಮಗೊಳಿಸಿದ್ದರಿಂದ ನೆಲಯಿಲ್ಲದೆ ದಿಗ್ಭ್ರಾಂತರಾದ ಮಹಿಳೆಯರು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣವೂ ನಡೆಯಿತು.  ಖುದ್ದು ಜಿಲ್ಲಾಧಿಕಾರಿಯವರೇ ಸ್ಥಳದಲ್ಲಿ ಹಾಜರಿದ್ದು ಪೊಲೀಸರ ಬಿಗಿ ಬಂದೋಬಸ್ತ್ನಲ್ಲಿ ಗುಡಿಸಲುಗಳನ್ನು ತೆರವುಗೊಳಿಸಿದರು. ಕೆಲವು ಮೀನುಗಾರರು ಕಡಲ ತೀರದ ವಾಚ್ ಟವರ್ ಬಳಿ ಅಕ್ರಮವಾಗಿ ಈ ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದರು. ಒಟ್ಟು 17 ಗುಡಿಸಲುಗಳನ್ನು ನೆಲಸಮ ಮಾಡಲಾಯಿತು. ನೆಲೆ ಕಳೆದುಕೊಂಡವರಿಗೆ ಪರ್ಯಾಕಯ ವ್ಯವಸ್ಥೆ ಮಾಡಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin