ಕಾರಿನಲ್ಲೇ ಲೇವಾದೇವಿಗಾರನ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

Murderನೆಲಮಂಗಲ,ಆ.15- ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ಯುವಕನನ್ನು ಕಾರಿನಲ್ಲೇ ಕೊಲೆ ಮಾಡಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಯಾದ ಯುವಕನನ್ನು ಕುಣಿಗಲ್ ತಾಲ್ಲೂಕಿನ ಜನಿವಾರ ಗ್ರಾಮದ ಹರೀಶ್(32) ಎಂದು ಗುರುತಿಸಲಾಗಿದೆ.  ಇಂದು ಮುಂಜಾನೆ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದ ದೇವಣ್ಣನಪಾಳ್ಯದ ಸೆಂಟ್ ಮೇರಿಸ್ ಶಾಲೆ ಮುಂಭಾಗ ಅನುಮಾನಸ್ಪದವಾಗಿ ನಿಂತಿದ್ದ ಕಾರನ್ನು ಗಮನಿಸಿದ ಸ್ಥಳೀಯರು ಕಾರಿನ ಬಳಿ ಹೋಗಿ ನೋಡಲಾಗಿ ಗ್ಲಾಸ್‍ಗೆ ಕೂಲಿಂಗ್ ಪೇಪರ್ ಅಳವಡಿಸಿದ್ದರಿಂದ ಒಳಗಡೆ ಯಾರಿದ್ದಾರೆ ಎಂಬುದು ತಿಳಿದು ಬಂದಿರಲಿಲ್ಲ.  ತದನಂತರ ಅನುಮಾನಗೊಂಡು ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಬಂದು ನೋಡಿದಾಗ ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಯುವಕನನ್ನು ಕೊಲೆ ಮಾಡಿರುವುದು ಗಮನಕ್ಕೆ ಬಂದಿದೆ.

ಕಾರು ನಿಂತಿರುವ ಸ್ಥಳದಿಂದ 10 ಅಡಿ ದೂರದಲ್ಲಿ ಬಾರ್ ಇದ್ದು, ರಾತ್ರಿ ಈತನ ಜತೆ ಬಂದ ಪರಿಚಯಸ್ಥರೇ ಮದ್ಯ ಕುಡಿಸಿ ಮಧ್ಯರಾತ್ರಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರಬಹುದೇ ಅಥವಾ ಬೇರೆ ಕಡೆ ಕೊಲೆ ಮಾಡಿ ಯಾರಿಗೂ ಅನುಮಾನ ಬಾರದಂತೆ ಕಾರನ್ನು ಈ ಜಾಗದಲ್ಲಿ ತಂದು ನಿಲ್ಲಿಸಿ ದುಷ್ಕರ್ಮಿಗಳು ಪರಾರಿಯಾಗದ್ದಾರೆಯೇ ಎಂಬ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin