ಕಾರಿನ ಮೇಲೆ ಲಾರಿ ಪಲ್ಟಿಯಾಗಿ ಬಿದ್ದು ಮೂವರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Accident--02

ಚಾಮರಾಜನಗರ, ಏ.14-ಮುಸುಕಿನ ಜೋಳ ತುಂಬಿದ ಲಾರಿ ಕಾರಿನ ಮೇಲೆ ಉರುಳಿಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಸೋಮವಾರ ಪೇಟೆ ಹೊರ ವಲಯದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಬಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಕೊಳ್ಳರಗಿ ಗ್ರಾಮದ ನಿವಾಸಿಗಳಾದ ಸಿದ್ದರಾಜು (28), ಲಕ್ಷ್ಮಿಕಾಂತ್(70) ಹಾಗೂ ಸಂಕೇತ್‍ಕುಮಾರ್(4) ಮೃತಪಟ್ಟ ದುರ್ದೈವಿಗ ಳು. ಸೃಷ್ಟಿ, ಪ್ರೀತಿ, ಕಲ್ಯಾಣ್‍ಕುಮಾರ್, ಸಂಗಣ್ಣಗೌಡ ಅವರಿಗೆ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಂದೇ ಕುಟುಂಬದವರಾದ ಇವರೆಲ್ಲ ಕಳೆದ ವಾರ ಆಂಧ್ರಪ್ರದೇಶ, ಕೇರಳದ ಅನಂತಪದ್ಮನಾಭ ದೇವಾಲಯಕ್ಕೆ ಹೋಗಿ ತಮಿಳುನಾಡು ಮುಖಾಂತರ ವಾಪಸ್ಸಾಗುತ್ತಿದ್ದರು. ಚಾಮರಾಜನಗರ ಸಮೀಪ ಇಂದು ಬೆಳಿಗ್ಗೆ 10.30ರ ಸಮಯದಲ್ಲಿ ಈ ದುರಂತ ಸಂಭವಿಸಿದೆ. ಘಟನೆ ನಡೆದು ಒಂದು ಗಂಟೆಯಾದರೂ ಪೊಲೀಸರು ಬಾರದ ಕಾರಣ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡಬೇಕಾಯಿತು. ಚಾಮರಾಜನಗರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments

Sri Raghav

Admin