ಕಾರು ಅಪಘಾತದಲ್ಲಿ ಬಿಹಾರ ಸಂಸದನ ಪುತ್ರ ದುರ್ಮರಣ
ಅಲಹಾಬಾದ್, ಮೇ 28-ಬಿಹಾರ ಲೋಕಸಭಾ ಸದಸ್ಯ ರಾಮ್ ಕಿಶೋರ್ ಸಿಂಗ್ ಅವರ ಪುತ್ರ ಅಲಹಾಬಾದ್ ನಗರದ ಹೊರವಲಯದಲ್ಲಿ ನಿನ್ನೆ ತಡ ರಾತ್ರಿ ಸಂಭವಿಸಿದ ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ. ಸಂಸದ ರಾಮ್ ಸಿಂಗ್ ಪುತ್ರ ರಾಜೀವ್ ಪ್ರತಾಪ್ ಸಿಂಗ್ ಚಾಲನೆ ಮಾಡುತ್ತಿದ್ದ ಹೋಂಡಾ ಸಿಟಿ ಕಾರು ಸೋರಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಬಂಕಟ್ ಗ್ರಾಮದ ಬಳಿ ಹೆದ್ದಾರಿಯಲ್ಲಿ ಟ್ರಕ್ಗೆ ಡಿಕ್ಕಿಯಾಯಿತು.
ಈ ಘಟನೆಯಲ್ಲಿ ಪ್ರತಾಪ್ ಮೃತಪಟ್ಟರು ಎಂದು ಪೊಲೀಸ್ ಅಧಿಕಾರಿ ಸತ್ಯೇಂದ್ರ ಸಿಂಗ್ ಹೇಳಿದ್ದಾರೆ. ರಾಮ್ ಕಿಶೋರ್ ಸಿಂಗ್ ವೈಶಾಲಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿರುವ ಲೋಕತಾಂತ್ರಿಕ್ ಜನತಾ ಪಕ್ಷದ (ಎಲ್ಜೆಪಿ) ಮುಖಂಡರಾಗಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments