ಕಾರು ಅಪಘಾತ : ಬರ್ತ್‍ಡೇ ಆಚರಿಸಿ ಬರುತ್ತಿದ್ದ ಮೂವರು ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Kolar-Accident--01

ಕೋಲಾರ, ಆ.04- ಇಂದು ಬೆಳಗಿನ ಜಾವ ಸಂಭಂವಿಸಿದ ಭೀಕರ ಕಾರು ಅಪಘಾತದಲ್ಲಿ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಕೋಲಾರದ ಮಡೇರಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ. ಸ್ನೇಹಿತನೊಬ್ಬನ ಜನ್ಮದಿನ ಸಂಭ್ರಮದಲ್ಲಿ ಪಾಲ್ಗೊಂಡು ವಾಪಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.  ಮೃತರನ್ನು ಶ್ರೀಹರಿ (21), ರೋಹನ್(20) ಹಾಗೂ ಕೆ.ವಿ.ಸುಭಾಷ್‍ಗೌಡ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕ ವಿಶ್ವಾಸ್(20). ಕಾರಿನಲ್ಲಿದ್ದ ಮತ್ತೊಬ್ಬ ಯುವಕ ಕಾರ್ತಿಕ್ ಪವಾಡ ಸದೃಶ್ಯವಾಗಿ ಪಾರಾಗಿದ್ದಾನೆ.

ಘಟನೆ ವಿವರ:

ಈ ಐವರು ಯುವಕರು ಸಮೀಪದ ನರಸಾಪುರ ಬಳಿ ಇರುವ ಕಾಫಿಡೇನಲ್ಲಿ ಶ್ರೀಹರಿಯ ಹುಟ್ಟುಹಬ್ಬ ಮುಗಿಸಿಕೊಂಡು ಕೋಲಾರಕ್ಕೆ ವಾಪಸಾಗುತ್ತಿದ್ದರು. ಸ್ವತಃ ಶ್ರೀಹರಿಯೇ ಚಾಲಕನಾಗಿದ್ದ.   ಬೆಳಗಿನ ಜಾವ 1.30ರ ಸುಮಾರಿನಲ್ಲಿ ಅತೀ ವೇಗವಾಗಿ ಬಂದ ಕಾರು ಡಿವೈಡರ್‍ಗೆ ಡಿಕ್ಕಿ ಹೊಡೆದಿದೆ. ಈ ರಭಸಕ್ಕೆ ಎಡಬದಿಯಲ್ಲಿದ್ದ ಕಾರು ಬಲಬದಿಗೆ ಹಾರಿ ಮೊದಲು ಈಶರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅದರಿಂದ ಅಪಾಯವೇನು ಆಗಲಿಲ್ಲ. ಆದರೆ, ಹಿಂದೆ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ಗೆ ಅಪ್ಪಳಿಸಿದೆ. ಈ ಅಪಘಾತದಲ್ಲಿ ಶ್ರೀಹರಿ ಮತ್ತು ರೋಹನ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಸುಭಾಷ್‍ಗೌಡ ಆಸ್ಪತ್ರೆಯ್ಲಲಿ ಸಾವನ್ನಪ್ಪಿದ್ದಾನೆ.

ಶ್ರೀಹರಿ ಮತ್ತು ರೋಹನ್ ಇಬ್ಬರು ಆಭರಣ ಅಂಗಡಿಗಳ ಮಾಲಿಕರ ಮಕ್ಕಳು ಸುಭಾಷ್‍ಗೌಡ ಸರ್ವೇಯರ್ ಮಗ. ಗಂಭೀರ ಗಾಯಗೊಂಡಿರುವ ವಿಶ್ವಾಸ್ ಬೂಸಾ ವ್ಯಾಪಾರಿಯೊಬ್ಬರ ಮಗ. ಅಪಾಯದಿಂದ ಪಾರಾಗಿರುವ ಕಾರ್ತಿಕ್ ದಯಾನಂದ್ ಎಂಬುವರ ಮಗ. ಕೆಎಸ್‍ಆರ್‍ಟಿಸಿ ಬಸ್ ತಿರುಪತಿಯಿಂದ ಬೆಂಗಳೂರಿಗೆ ಬರುತ್ತಿತ್ತು.  ಸುದ್ದಿ ತಿಳಿಯುತ್ತಿದ್ದಂತೆ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೋಲಾರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಎಸ್‍ಐ ಶಿವರಾಜ್ ಅವರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin