ಕಾರು ಡಿಕ್ಕಿಹೊಡೆದು ಬೈಕ್‍ನಲ್ಲಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

Accident--01

ಬಳ್ಳಾರಿ, ಮಾ.25- ಕಾರು, ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಹೊರವಲಯದ ಆಲಿಪುರ ರಸ್ತೆ ಬಳಿ ನಡೆದಿದೆ.  ಶ್ರೀನಿವಾಸ್, ಪತ್ನಿ ವೀಣಾ ಹಾಗೂ ಮಗ ಸಂತೋಷ್ ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ದೈವಿಗಳು. ಹೊಸಪೇಟೆಯಿಂದ ಬಳ್ಳಾರಿಗೆ ಬರುತ್ತಿದ್ದ ಕಾರು ಆಲಿಪುರ ಬಳಿ ಬರುತ್ತಿದ್ದ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ತಮ್ಮ ಗ್ರಾಮದ ಜನರು ತಮ್ಮ ಕಣ್ಣೆದುರೇ ಸಾವನ್ನಪ್ಪಿದ ದೃಶ್ಯ ಕಂಡು ಕೆರಳಿದ ಗ್ರಾಮಸ್ಥರು ಕಾರನ್ನು ಸುಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿ ಕೆಲಕಾಲ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು. ಬಳ್ಳಾರಿ ಎಸ್‍ಪಿ ಅರುಣ್ ರಂಗರಾಜನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೃತ ಶ್ರೀನಿವಾಸ್ ಮತ್ತು ವೀಣಾ ಕಳೆದ ಮೂರು ದಶಕದಿಂದ ಖಾಸಗಿ ಆಸ್ಪತ್ರೆಯ ವೈದ್ಯಕೀಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಅಪಘಾತವೆಸಗಿದ ಕಾರು ವೇಣಿ ವೀರಾಪುರ ಗ್ರಾಮಕ್ಕೆ ಸೇರಿದ್ದು.   ಕಾರಿನಲ್ಲಿ ಓರ್ವನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇಬ್ಬರು ಪರಾರಿಯಾಗಿದ್ದು, ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

Facebook Comments

Sri Raghav

Admin