ಕಾರ್ಖಾನೆಯಲ್ಲಿ ಅನಿಲ ಸ್ಫೋಟ : ಇಬ್ಬರಿಗೆ ಗಂಭೀರ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Nanjanagudu-factory-firing

ನಂಜನಗೂಡು, ಆ.26- ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಜುಬಿಲಿಯಂಟ್ ಔಷಧ ತಯಾರಿಕಾ ಘಟಕದಲ್ಲಿ ಅನಿಲ ಸ್ಫೋಟಗೊಂಡು ಇಬ್ಬರಿಗೆ ತೀವ್ರ ಸ್ವರೂಪದ ಗಾಯವಾಗಿರುವ ಘಟನೆ ನಿನ್ನೆ ನಡೆದಿದೆ. ಗಾಯಾಳುಗಳನ್ನು ಅಪೋಲೋ  ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾರ್ಮಿಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಯಭೀತಿಗೊಂಡಿದ್ದಾರೆ.ಜುಬಿಲಿಯೆಂಟ್ ಔಷಧ ತಯಾರಿಕ ಘಟಕದ ಕಾರ್ಖಾನೆಯಾಗಿದ್ದು, ರಾಸಾಯನಿಕ(ಆರ್ಪೋಗ್ಯಾರಿಯನ್) ವಸ್ತುಗಳನ್ನು ತುಂಬಿದ ತೀವ್ರ ಒತ್ತಡದಿಂದ ಡ್ರಂ ಒಂದು ಸಿಡಿದು ಇಬ್ಬರು ಕಾರ್ಮಿಕರು ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದಾರೆ.ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಬಸವರಾಜು ಚಿಗರಿ, ಸಂಪನ್ಮೂಲಾಧಿಕಾರಿ ಕೆ.ಅನಂತ್‍ಗೌಡ, ಆರ್.ಐ.ಶ್ರೀನಿವಾಸ್ ಪರಿಶೀಲನೆ ನಡೆಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin