ಕಾರ್ಖಾನೆ ಮಾಲೀಕರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಬೇಕು

ಈ ಸುದ್ದಿಯನ್ನು ಶೇರ್ ಮಾಡಿ

DESHPANDE

ಹೊಸಕೋಟೆ, ಆ.25- ಕೈಗಾರಿಕೋದ್ಯಮಿಗಳು ತಮ್ಮ ಲಾಭದಲ್ಲಿ ಸಮಾಜದಲ್ಲಿ ಉಪಯುಕ್ತ ಸೌಲಭ್ಯಗಳನ್ನು ಕಲ್ಪಿಸಲು ಮನಸು ಮಾಡಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯಮಿಗಳ ಸಾಮಾಜಿಕ ಜವಾಬ್ದಾರಿ ಬಗ್ಗೆ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ತಾವುಗಳಿಸುವ ಲಾಭಾಂಶದಲ್ಲಿ ಸ್ವಲ್ಪವಾದರು ಸ್ವಯಂಪ್ರೇರಿತರಾಗಿ ಸಮಾಜದ ಅಭಿವೃದ್ಧಿಗಾಗಿ ಏನದರು ಕೊಡುಗೆಯನ್ನು ನೀಡುವ ಮನೋಭಾವವನ್ನು ಹೊಂದಿರಬೇಕು. ಇದರಿಂದ ಜನರಲ್ಲಿಯೂ ಸಹ ಕೈಗಾರಿಕೆಗಳ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿ ಪರಸ್ಪರ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಶಾಸಕ ನಾಗರಾಜ್ ಮಾತನಾಡಿ, ಸರ್ಕಾರಿ ಕಾಲೇಜುಗಳಲ್ಲಿ ಗ್ರಂಥಾಲಯ ಪ್ರಯೋಗಾಲಯದಂತಹ ಉಪಯುಕ್ತ ಸೌಲಭ್ಯಗಳನ್ನು ಒದಗಿಸಬೇಕಾಗಿದೆ ಎಂದು ತಿಳಿಸಿದರು.ಇಂಡೋ ಯುಎಸ್ ಮಿಮ್ಟೆಕ್ ಕಾರ್ಖಾನೆಯ ನಿರ್ದೇಶಕ ಸುರೇಶ್‍ಗೌಡ ಮಾತನಾಡಿ, 1995 ರಿಂದಲೂ ಸಂಸ್ಥೆಯು ಸಾಮಾಜಿಕ ಉಪಯುಕ್ತ ಚಟುವಟಿಕೆಗಳಲ್ಲಿ ತೊಡಗಿದ್ದು, ಇದಕ್ಕಾಗಿ ಪ್ರತಿ ವರ್ಷ ಒಂದು ಕೋಟಿ ಹಣವನ್ನು ಮೀಸಲಿಡುತ್ತಿದೆ ಎಂದು ತಿಳಿಸಿದರು.ಸಂಸದ ಎಂ.ವೀರಪ್ಪ ಮೊಯ್ಲಿ , ಪ್ರಮೋದ್ ಕುಮಾರ್ ಜೈನ್, ಜಿಲ್ಲಾಧಿಕಾರಿ ಎಸ್.ಪಾಲಯ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಅಧ್ಯಕ್ಷ ವಿ.ಪ್ರಸಾದ್, ನಗರಸಭೆ ಅಧ್ಯಕ್ಷರಾದ ಗುಲಾಬ್ ಜಾನ್, ಪ್ರಾಂಶುಪಾಲ ಡಾ.ಮುನಿನಾರಾಯಣಪ್ಪ ಮತ್ತಿತರರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin