ಕಾರ್ಟೂನನಲ್ಲಿ ಖಾಕಿಗೆ ಅದ್ಧೂರಿ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

9

ಬೆಳಗಾವಿ,ಫೆ.5- ಅಪರಾಧ ತಡೆದು ಸಾಮರಸ್ಯತೆ ಮೂಡಿಸುವ ಪೊಲೀಸ ಇಲಾಖೆಯ ಕಾರ್ಯವೈಖರಿ ಮತ್ತು ನಾಗರಿಕರು ವಹಿಸಬೇಕಾದ ಎಚ್ಚರಿಕೆಯನ್ನು ಪ್ರತಿಬಿಂಬಿಸುವ ಪರಿಣಾಮಕಾರಿ ಕಾರ್ಟೂನನಲ್ಲಿ ಖಾಕಿ ಇಂದು ಬೆಳಿಗ್ಗೆ ಸುಂದರ ಪರಿಸರದ ಶರ್ಖತ ಉದ್ಯಾನದಲ್ಲಿ ಪ್ರಾರಂಭವಾಯಿತು.ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಜೆ. ಸತೀಶಸಿಂಗ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪೊಲೀಸ ಆಯುಕ್ತ ಟಿ.ಜೆ. ಕೃಷ್ಣಭಟ, ನ್ಯಾಯಾಧೀಶರಾದ ಬಸವರಾಜ ಚಿಗರೆಡ್ಡಿ, ದೇಶಪಾಂಡೆ ಜಿ.ಎಸ, ಎಂ.ಎಂ. ಪಾಟೀಲ, ಪ್ರಭಾವತಿ, ಡಿಸಿಪಿ ಜಿ. ರಾಧಿಕಾ ಹಾಗೂ ಅಮರನಾಥರೆಡ್ಡಿ, ವಿವಿಧ ನ್ಯಾಯಾಧೀಶರು,ರೋಟರಿ ಕ್ಲಬ ಅಧ್ಯಕ್ಷ ಅವಿನಾಶ ಪೋತದಾರ, ಎಸಿಪಿ ಶಿವಕುಮಾರ, ಶಂಕರ ಮಾರಿಹಾಳ, ಗುರುಶಾಂತಪ್ಪ, ಇನ್ಸಪೆಕ್ಟರ ಜೆ. ಕಾಲಿಮಿರ್ಚಿ, ಅಡಿವೆಪ್ಪ ಗುದಿಗೆಪ್ಪ, ಪಿಎಸ್‍ಐ ಕೃಷ್ಣವೇಣಿ ಗುರ್ಲಹೊಸೂರ, ಪಾಲಿಕೆ ಹಾಗೂ ಕಾಂಟೋನ್ಮೆಂಟ ಸದಸ್ಯರು ಈ ಸಂದರ್ಭದಲ್ಲಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin