ಕಾರ್ತೀಕ ಮಾಸದ ಜಾತ್ರಾ ಕಾಲದ ಸುಂಕ ಹರಾಜು ಪೂರ್ವಭಾವಿ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

kr-pet-4

ಕೆ.ಆರ್.ಪೇಟೆ,ಅ.23: ಬಯಲು ಸೀಮೆಯ ಕುಕ್ಕೇಸುಬ್ರಹ್ಮಣ್ಯ ಎಂದೇ ಪ್ರಸಿದ್ದ ಪಡೆದಿರುವ ತಾಲೂಕಿನ ಕಿಕ್ಕೇರಿ ಹೋಬಳಿಯ ಸಾಸಲು ಶ್ರೀ ಕ್ಷೇತ್ರದ ಶಂಭುಲಿಂಗೇಶ್ವರ ಮತ್ತು ಸೋಮೇಶ್ವರ ಸ್ವಾಮಿಯ ಕಾರ್ತೀಕ ಮಾಸದ ಜಾತ್ರಾ ಕಾಲದ ಸುಂಕ ಹರಾಜು ಪೂರ್ವಭಾವಿ ಸಭೆಯು ತಾಲೂಕು ಮುಜರಾಯಿ ಅಧಿಕಾರಿ ತಹಸೀಲ್ದಾರ್ ಕೆ.ರತ್ನ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.  ದಿನಾಂಕ: 31-10-2016ರಿಂದ 28-11-2016ವರೆಗೆ ಒಂದು ತಿಂಗಳು ಕಾರ್ತೀಕ ಮಾಸದ ಜಾತ್ರೆಗೆ ಕನಿಷ್ಠ ಐದಾರು ಲಕ್ಷ ಭಕ್ತಾಧಿಗಳು ಬೇಟಿ ನೀಡುವ ಸಾಧ್ಯತೆ ಇದೆ. ಜಾತ್ರಾ ಅವಧಿಯಲ್ಲಿ 40ಮೈಕ್ರಾನ್‍ಗಿಂತ ಕಡಿಮೆ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲು ಹಾಗಾಗಿ ಭಕ್ತಾಧಿಗಳು ಪರಿಸರ ಉಳಿವಿಗಾಗಿ ಇದಕ್ಕೆ ಪೂರ್ಣ ಸಹಕಾರ ನೀಡಬೇಕೆಂದು ಸಭೈಯ ಮೂಲಕ ಕೋರಲಾಯಿತು.

ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಕೊಳದಲ್ಲಿ ತೀರ್ಥ ಸ್ನಾನ ಮಾಡುವ ಭಕ್ತಾಧಿಗಳಿಗೆ ಕೊಳದ ಬದಿಯಲ್ಲಿ ಬಟ್ಟೆ ಬದಲಾಯಿಸುವ ಡ್ರೆಸ್ಸಿಂಗ್ ರೂಮ್ ವ್ಯವಸ್ಥೆ, ಕ್ಷೇತ್ರದ ಸ್ವಚ್ಚತೆಯ ಹಿತದೃಷ್ಠಿಯಿಂದ ಕಸದ ಡಬ್ಬಿಗಳ ವ್ಯವಸ್ಥೆ, ನಿರಂತರ ವಿದ್ಯುತ್ ಪೂರೈಕೆ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಯಿತು. ಹಿಂದೂಗಳೇ ಅಲ್ಲದೆ ಮುಸ್ಲಿಂ, ಕ್ರೈಸ್ತ ಭಕ್ತಾಧಿಗಳು ಈ ಕ್ಷೇತ್ರಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲು ಪೊಲೀಸ್ ಮನವಿ ಸಲ್ಲಿಸಲು ತೀರ್ಮಾನ ಕೈಗೊಳ್ಳಲಾಯಿತು.

ಸಭೈಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾಕೃಷ್ಣ, ಉಪತಹಸೀಲ್ದಾರ್ ಲಕ್ಷ್ಮೀಕಾಂತ್, ರಾಜಸ್ವ ನಿರೀಕ್ಷಕ ಗೋಪಾಲಕೃಷ್ಣ, ಗ್ರಾಮ ಲೆಕ್ಕಾಧಿಕಾರಿ ತಿಪ್ಪೇಶ್, ಕಾರ್ಮಿಕ ನಿರೀಕ್ಷಕ ಅಬ್ದುಲ್ ರವೂಫ್, ಶಿರಸ್ತೇದಾರ್ ಮಹದೇವೇಗೌಡ, ಶ್ರೀನಿವಾಸ್, ಕೃಷ್ಣಮೂರ್ತಿ, ಸೋಮಾಚಾರ್, ನೀರಾವರಿ ಇಲಾಖೆಯ ಗುರುಪ್ರಸಾದ್, ವಿದ್ಯುತ್ ಇಲಾಖೆಯ ಕೃಷ್ಣೇಗೌಡ, ಕಿಕ್ಕೇರಿ ಪೊಲೀಸ್ ಠಾಣೆಯ ಎ.ಎಸ್.ಐ. ಚೌಡೇಗೌಡ ಸ್ಭೆರಿದಂತೆ ಈ ಭಾಗದ ಅನೇಕ ಮುಖಂಡರು ಈ ಸಂದಭದಲ್ಲಿ ಹಾಜರಿದ್ದರು.

25ಕ್ಕೆ ಬಹಿರಂಗ ಹರಾಜು:

ಜಾತ್ರಾ ಕಾಲದ ವಿವಿಧ ಬಾಬ್ತುಗಳ ಸುಂಕ ಹರಾಜು ಇದೇ ಅ.25ರಂದು ಬೆಳಿಗ್ಗೆ 11ಪಟ್ಟಣದ ತಾಲೂಕು ಕಚೇರಿಯ ಮಿನಿವಿಧಾನ ಸೌಧದ ಆವರಣದಲ್ಲಿ ನಡೆಯಲಿದೆ. ಹರಾಜಿನ ಷರತ್ತುಗಳು ಮತ್ತು ನಿಬಂಧನೆಗಳ ಹೆಚ್ಚಿನ ವಿವರಗಳಿಗೆ ತಾಲೂಕು ಕಚೇರಿಯ ಮುಜರಾಯಿ ಇಲಾಖೆ ವಿಭಾಗದಲ್ಲಿ ಮಾಹಿತಿ ಪಡೆಯಬಹುದೆಂದು ತಹಸೀಲ್ದಾರ್ ಕೆ.ರತ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin